Home News ಖ್ಯಾತ ಡಾನ್ಸರ್ ಶೆಫಾಲಿ ಹೃದಯಾಘಾತಕ್ಕೆ ಬಲಿ

ಖ್ಯಾತ ಡಾನ್ಸರ್ ಶೆಫಾಲಿ ಹೃದಯಾಘಾತಕ್ಕೆ ಬಲಿ

ಮುಂಬಯಿ: ನಟ ಪುನೀತ್ ರಾಜ್​ಕುಮಾರ್ ನಟನೆಯ ಹುಡುಗರು ಚಿತ್ರದ ‘ನಾ ಬೋರ್ಡು ಇರದ ಬಸ್ಸನು’ ಎಂಬ ಹಾಡಿಗೆ ಭರ್ಜರಿ ಸ್ಟಪ್‌ ಹಾಕಿದ್ದ ಬಾಲಿವುಡ್‌ನ ಖ್ಯಾತ ನಟಿ ಹಾಗೂ ಮಾಡೆಲ್​ ಶೆಫಾಲಿ ಜರಿವಾಲಾ ಅವರು ತಡರಾತ್ರಿ ಹೃದಯ ಸ್ತಂಭನದಿಂದ ನಿಧನ ಹೊಂದಿದ್ದಾರೆ.
2002ರಲ್ಲಿ ಕಾಂಟಾ ಲಗಾ ಎನ್ನುವ ಹಾಡಿನ ಮೂಲಕ ಶೆಫಾಲಿ ಜರಿವಾಲಾ ಹೆಚ್ಚು ಪ್ರಖ್ಯಾತಿಯನ್ನು ಪಡೆದಿದ್ದರು. ಹಲವಾರು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ ಹಿಂದಿ ಬಿಗ್ ಬಾಸ್ 13ರ ಸ್ಪರ್ಧಿಯಾಗಿದ್ದರು. 42 ವರ್ಷದ ಶೆಫಾಲಿ ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶೆಫಾಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಅಷ್ಟು ಹೊತ್ತಿಗಾಗಲೇ ಶೆಫಾಲಿ ಕೊನೆಯುಸಿರೆಳೆದಿದ್ದಾರೆ. 982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ಶೆಫಾಲಿ ವಿವಾಹವಾದರು. ಆ ಬಳಿಕ ಪತಿಯೊಂದಿಗೆ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಶೆಫಾಲಿ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು. ಕನ್ನಡ ಸೇರಿದಂತೆ ಹಲವು ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದ ನಟಿ ಸಾವಿನ ಸುದ್ದಿ ಕೇಳಿ ಚಿತ್ರರಂಗಕ್ಕೆ ಆಘಾತವಾಗಿದೆ. ಅನೇಕ ಸಹನಟರು ಸಂತಾಪ ಸೂಚಿಸಿದ್ದಾರೆ.

Exit mobile version