Home ನಮ್ಮ ಜಿಲ್ಲೆ ಚಿತ್ರದುರ್ಗ ಕೈʼಗೆ ಸಿಗದ ಟಿಕೆಟ್‌; ಸಿಡಿದೆದ್ದ ರಘು ಆಚಾರ್‌

ಕೈʼಗೆ ಸಿಗದ ಟಿಕೆಟ್‌; ಸಿಡಿದೆದ್ದ ರಘು ಆಚಾರ್‌

0

ಚಿತ್ರದುರ್ಗ: ಚಿತ್ರದುರ್ಗ ಕ್ಷೇತ್ರದಲ್ಲಿ ಭರ್ಜರಿ ಸಿದ್ಧತೆ ನಡೆಸಿದ್ದ ಮಾಜಿ ಎಂಎಲ್‌ಸಿ ರಘು ಆಚಾರ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸಿಡೆದಿದ್ದಾರೆ.

ವೀರೇಂದ್ರ ಪಪ್ಪಿಗೆ ಟಿಕೆಟ್ ನೀಡುತ್ತಿದ್ದಂತೆ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ‌ದ ಅವರು, ಕಾಂಗ್ರೆಸ್ ಅದರಲ್ಲಿಯೂ ಕೆಪಿಸಿಸಿ ಅಧ್ಯಕ್ಷರು ಮೋಸ ಮಾಡಿದ್ದಾರೆ. 197 ಸಣ್ಣ ಸಮುದಾಯಗಳಿಗೆ ಟಿಕೆಟ್ ನೀಡಿಲ್ಲ. 17ರಂದು ನಾಮಪತ್ರ ಸಲ್ಲಿಸುತ್ತೇನೆ. ನಂತರ 224 ಕ್ಷೇತ್ರದಲ್ಲಿಯೂ ವಿಶ್ಚಕರ್ಮ ಸಮುದಾಯದ ಸ್ವಾಮೀಜಿ ಹಾಗೂ ತಾವು ಪ್ರವಾಸ ಮಾಡಿ ವಿಶ್ವಕರ್ಮ ಸಮುದಾಯದವರು ಕಾಂಗ್ರೆಸ್‌ಗೆ ಮತ ಹಾಕದಂತೆ ಮಾಡಲಾಗುವುದು ಎಂದರು.

ಎಂಎಲ್‌ಸಿ ಚುನಾವಣೆಗೆ ಬದಲು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಹೇಳಿದ ನಾಯಕರು ಈಗ ಮೋಸ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಮರೆತ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಶೀಘ್ರದಲ್ಲಿ ಜನರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು. ಚುನಾವಣೆಯಲ್ಲಿ ಸ್ಪರ್ಧಿಸುವುದು ಗ್ಯಾರಂಟಿ ಎಂದರು.

Exit mobile version