ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ಕೆಲಸಗಳ ನಡುವೆ ಉತ್ತರ ಖಂಡಕ್ಕೆ 3 ದಿನಗಳ ಪ್ರವಾಸ ರಾಹುಲ್ ಗಾಂಧಿ ಕೈಗೊಂಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇದಾರನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಅಲ್ಲಿದ್ದ ಅರ್ಚಕರು ಮತ್ತು ಯಾತ್ರಿಕರೊಂದಿಗೆ ಸಂವಾದ ನಡೆಸಿದರು. ಕೇದಾರಪುರಿಯಲ್ಲಿರುವ ಭೈರವನಾಥ ಮತ್ತು ಶಂಕರಾಚಾರ್ಯ ದೇವಸ್ಥಾನದ ದರ್ಶನ ಪಡೆದಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪೋಸ್ಟ್ ಮಾಡಿದೆ.
