Home ಅಪರಾಧ ಕರೆ ಮಾಡಿ ಹಣ‌ ಎಗರಿಸಿದ ಖದೀಮರು

ಕರೆ ಮಾಡಿ ಹಣ‌ ಎಗರಿಸಿದ ಖದೀಮರು

0

ಬಾಗಲಕೋಟೆ: ಇಳಕಲ್ ನಗರದ ಮಹಿಳೆಯೋರ್ವಳಿಗೆ ಕರೆ ಮಾಡಿ ಅವರಿಂದ ಬ್ಯಾಂಕ್ ಖಾತೆ ನಂಬರ್ ಮತ್ತು ಎಟಿಎಂ ನಂಬರ್ ಪಡೆದುಕೊಂಡು ಹಣ ಎಗರಿಸಿದ ಘಟನೆ ನಡೆದಿದೆ.
ಸ್ಥಳೀಯ ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿದ ಮಹಿಳೆಯಿಂದ ಅಕೌಂಟ್ ನಂಬರ್ ಮತ್ತು ಎಟಿಎಂ ಪಿನ್‌ಕೋಡ್ ಪಡೆದುಕೊಂಡು ಅವರ ಖಾತೆಯಲ್ಲಿನ ೨,೬೧,೦೦೦ ಹಣವನ್ನು ವರ್ಗಾವಣೆ ಮಾಡಿಕೊಂಡ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಶಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಅಪರಾಧ ವಿಭಾಗದ ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ನಡೆಸಿದ್ದಾರೆ.

Exit mobile version