Home ನಮ್ಮ ಜಿಲ್ಲೆ ಚಿಕ್ಕಮಗಳೂರು ಕಂಠಪೂರ್ತಿ ಕುಡಿದು ಆಪರೇಷನ್ ಥಿಯೇಟರ್‌ನಲ್ಲಿ ಮಲಗಿದ ವೈದ್ಯ

ಕಂಠಪೂರ್ತಿ ಕುಡಿದು ಆಪರೇಷನ್ ಥಿಯೇಟರ್‌ನಲ್ಲಿ ಮಲಗಿದ ವೈದ್ಯ

0

ಚಿಕ್ಕಮಗಳೂರು: ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯನೊಬ್ಬ ಕಂಠಪೂರ್ತಿ ಕುಡಿದು ಬಂದು ಆಪರೇಷನ್ ಥಿಯೇಟರ್‌ನಲ್ಲಿ ಮಲಗಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಳಸ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡದಿದೆ. ಆಸ್ಪತ್ರೆಯಲ್ಲಿ ಸಂತಾನಹರಣ ಆಪರೇಷನ್ ಕ್ಯಾಂಪ್ ಏರ್ಪಾಡು ಮಾಡಲಾಗಿದ್ದು, ಮುಂಜಾನೆ 8ಗಂಟೆಗೆ ಮಹಿಳೆಯರಿಗೆ ಬರಲು ಹೇಳಲಾಗಿತ್ತು. ಆದರೆ 8ಗಂಟೆಗೆ ಬರಬೇಕಾಗಿದ್ದ ವೈದ್ಯ ಬಾಲಕೃಷ್ಣ ಕಂಠಪೂರ್ತಿ ಕುಡಿದು 3ಗಂಟೆಗೆ ಆಸ್ಪತ್ರೆಗೆ ಬಂದಿದ್ದಾನೆ. ಬಳಿಕ ಶಸ್ತ್ರಚಿಕಿತ್ಸೆ ಮಾಡಬೇಕಿದ್ದ ವೈದ್ಯ ನಿಲ್ಲಲಾಗದ ಪರಿಸ್ಥಿತಿ ನೋಡಿ ಸಿಬ್ಬಂದಿ ಆಸ್ಪತ್ರೆಯ ಬೆಡ್​ ಮೇಲೆ ಮಲಗಿಸಿದ್ದಾರೆ.
ಬಳಿಕ ವೈದ್ಯನೊಬ್ಬ ಕುಡಿದು ಬಂದು ಶಸ್ತ್ರಚಿಕಿತ್ಸೆ ಮಾಡಲು ಮುಂದಾಗಿದ್ದ ಘಟನೆ ಹೊರಬೀಳುತ್ತಿದ್ದಂತೆ ಮಹಿಳೆಯರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ವೈದ್ಯನ ತಪ್ಪನ್ನು ಮರೆಮಾಚಲು ಪ್ರಯತ್ನಿಸಿದ್ದು, ಶುಗರ್ ಕಾರಣದಿಂದ ಕುಸಿದು ಬಿದ್ದಿದ್ದಾರೆ ಎಂದು ಹೈ ಡ್ರಾಮಾ ಮಾಡಿದ್ದಾರೆ.

Exit mobile version