Home ತಾಜಾ ಸುದ್ದಿ ಆಡಿಯೋ ವೈರಲ್: ಕೇಸು ದಾಖಲು

ಆಡಿಯೋ ವೈರಲ್: ಕೇಸು ದಾಖಲು

0

ಬೆಳಗಾವಿ ಜಿಲ್ಲೆಯ ನೇಗಿನಹಾಳ ಮಠದ ಲಿಂಗಾಯತ ಮಠಾಧೀಶ ಬಸವ ಸಿದ್ದಲಿಂಗ ಸ್ವಾಮೀಜಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ ಆಡಿಯೋದಲ್ಲಿದ್ದ ಇಬ್ಬರು ಮಹಿಳೆಯರಿಗಾಗಿ ಹುಡುಕಾಟ ನಡೆಸಿದ್ದಾರೆ. ವಿವಿಧ ಮಠಾಧೀಶರು ಲೈಂಗಿಕ ದೌರ್ಜನ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಇಬ್ಬರು ಮಹಿಳೆಯರು ಫೋನ್‌ನಲ್ಲಿ ಮಾತನಾಡಿದ್ದ ಸಂಭಾಷಣೆ ವೈರಲ್ ಆಗಿದ್ದು, ಸಾವಿಗೆ ಕಾರಣವಾಯಿತು ಎನ್ನಲಾಗಿದೆ. ನೇಗಿನಹಾಳ ನಿವಾಸಿ ಸೋಮಪ್ಪ ಈರಪ್ಪ ಬಾಗೇವಾಡಿ ಎಂಬುವವರ ದೂರಿನ ಮೇರೆಗೆ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಬೈಲಹೊಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಯು.ಎಚ್. ಸಾತೇನಹಳ್ಳಿ ತಿಳಿಸಿದ್ದಾರೆ.

Exit mobile version