ಬಳ್ಳಾರಿ: ಆಂಧ್ರ, ಕರ್ನಾಟಕ ಗಡಿ ಭಾಗದ ಸಮಸ್ಯೆಯನ್ನು ಪುನರ್ ಪರಿಶೀಲಿಸಿ ಎಂದು ನಾನು ವೈಯುಕ್ತಿಕವಾಗಿ ಸರ್ಕಾರಕ್ಕೆ ಮನವಿ ಮದುವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ನಮ್ಮ ಸರ್ಕಾರ ಗಟ್ಟಿ ನಿಲುವು ತಾಳಿದೆ ಎಂದರು.
ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತ ಯಾವುದೇ ಸ್ಪಷ್ಟ ನಿಲುವು ಇನ್ನು ತಳೆದು ಇಲ್ಲ. ಆದರೆ ಆಗಾಗಲೇ ಹೊಸಪೇಟೆಯಲ್ಲಿ ಮನೆ ಮಾಡಿದ್ದೇನೆ. ಇನ್ನೊಂದು ದಿನದಲ್ಲಿ ಬಳ್ಳಾರಿಯಲ್ಲಿ ಸಹ ಮನೆ ಮಾಡುವೆ ಎಂದರು.
ನನಗಿಂತ ಉತ್ತಮ ಅಭ್ಯರ್ಥಿ ಸಿಕ್ಕರೆ ಖಂಡಿತಾ ನಾನು ಹಿಂದೆ ಸರಿಯಲು ಸಿದ್ದ. ಒಟ್ಟಿನಲ್ಲಿ ನಮಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಬರಬೇಕು ಎಂದು ಅವರು ತಿಳಿಸಿದರು. ನಮ್ಮ ಪಕ್ಷ ಸಂಘಟಿತ ಆಗಿದೆ. ಇದೆ ಕಾರಣಕ್ಕೆ ಇಂದು ಬಿಜೆಪಿ ತನ್ನ ವಿಪಕ್ಷ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದರು.
