Home ತಾಜಾ ಸುದ್ದಿ ʻಡೋಂಟ್ ಡಿಸ್ಟರ್ಬ್ʼ ಎಂ.ಬಿ.‌ ಪಾಟೀಲ್‌ಗೆ ಗದರಿದ ಡಿಕೆಶಿ

ʻಡೋಂಟ್ ಡಿಸ್ಟರ್ಬ್ʼ ಎಂ.ಬಿ.‌ ಪಾಟೀಲ್‌ಗೆ ಗದರಿದ ಡಿಕೆಶಿ

0

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವೇದಿಕೆಯಲ್ಲೇ ಸಚಿವ ಎಂ.ಬಿ ಪಾಟೀಲ್‌ಗೆ ಡೋಂಟ್ ಡಿಸ್ಟರ್ಬ್ ಎಂದು ಹೇಳುವ ಮೂಲಕ ಅವರ ವಿರುದ್ಧ ಗರಂ ಆದ ಪ್ರಸಂಗ ಇಂದು ನಡೆಯಿತು.
ಇಂದಿರಾ ಭವನದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್‌ ಭಾಷಣ ಮಾಡುತ್ತಿರುವಾಗ, ಸಿದ್ದರಾಮಯ್ಯ ಜೊತೆ ಎಂ.ಬಿ. ಪಾಟೀಲ್ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಡಿಕೆಶಿ `ಡೋಂಟ್ ಡಿಸ್ಟರ್ಬ್, ಡೋಂಟ್ ಡಿಸ್ಟರ್ಬ್’ ಎಂದು ಎಂ.ಬಿ ಪಾಟೀಲ್‌ಗೆ ಗದರಿದ್ದಾರೆ. ಆಗ ಎಂ.ಬಿ. ಪಾಟೀಲ ಸಮಜಾಯಿಷಿ ನೀಡಲು ಮುಂದಾದಾಗ ಇರಲಿ ಡೋಂಟ್ ಡಿಸ್ಟರ್ಬ್, ಇಲ್ಲಿ ಕೆಲವು ಹೊಸ ವಿಚಾರ ಹೇಳ್ತಿದ್ದೀನಿ ಎಂದು ಡಿಕೆಶಿ ಹೇಳಿದರು.

Exit mobile version