Home ನಮ್ಮ ಜಿಲ್ಲೆ ಕೊಪ್ಪಳ ವಿಜೃಂಭಣೆಯ ಮಳೆಮಲ್ಲೇಶ್ವರ ರಥೋತ್ಸವ

ವಿಜೃಂಭಣೆಯ ಮಳೆಮಲ್ಲೇಶ್ವರ ರಥೋತ್ಸವ

0

ಕೊಪ್ಪಳ: ಐತಿಹಾಸಿಕ ಪ್ರಸಿದ್ಧ ಮಳೆಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ಶ್ರಾವಣ ಮಾಸ ಕೊನೆಯ ಭಾನುವಾರ ಜಾತ್ರಾ ಮಹೋತ್ಸವದ ನಿಮಿತ್ತ ನಗರದ ಹೊರವಲಯದಲ್ಲಿರುವ ಮಳೆ ಮಲ್ಲೇಶ್ವರನಿಗೆ ಬೆಳಿಗ್ಗೆಯಿಂದಲೇ ಅಭಿಷೇಕ ಸೇರಿದಂತೆ ವಿವಿಧ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧಧಾರ್ಮಿಕ ಕಾರ್ಯಕ್ರಮ ಜರುಗಿದರು. ಭಕ್ತರು ಬೆಳಿಗ್ಗೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿ, ಕಾಯಿ ಹೊಡೆಸಿ, ದರ್ಶನ ಪಡೆದು, ಕೃತಾರ್ಥರಾದರು.

Exit mobile version