ಬೆಂಗಳೂರು: ಯುವ ನಟ ಗಿಲ್ಲಿ ಮತ್ತು ಸೋಶಿಯಲ್ ಮೀಡಿಯಾ ಸೆನ್ಸೇಶನ್ ಗೌರವ್ ಶೆಟ್ಟಿ ನಾಯಕ ಪಾತ್ರಗಳಲ್ಲಿ ಅಭಿನಯಿಸಿರುವ ಹೊಸ ಕನ್ನಡ ಚಿತ್ರ ‘ಸೂಪರ್ ಹಿಟ್’ ಚಿತ್ರದ ಟೀಸರ್ ಬಿಡುಗಡೆಯಾಗಿ, ಆರಂಭದಲ್ಲೇ ಅದ್ಭುತ ಪ್ರತಿಕ್ರಿಯೆ ಪಡೆಯುತ್ತಿದೆ. ನಿರ್ದೇಶಕ ವಿಜಯಾನಂದ್ ಅವರ ಕಥೆ–ಚಿತ್ರಕಥೆ–ಸಂಭಾಷಣೆಯೊಂದಿಗೆ ಮೂಡಿ ಬಂದಿರುವ ಈ ಸಿನಿಮಾ, ಥ್ರಿಲ್ಲರ್ ಮತ್ತು ಕಾಮಿಡಿಯ ವಿಭಿನ್ನ ಸಂಯೋಜನೆಯಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ.
ಕಮರ್ಶಿಯಲ್ ರಂಗು–ಹಾಸ್ಯದ ಡೋಸ್ – ನಿರ್ದೇಶಕರಿಂದ ಭರವಸೆ: ಖ್ಯಾತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ಅವರ ತಮ್ಮ ವಿಜಯಾನಂದ್, ಯುವ ಸಮುದಾಯಕ್ಕೆ ಹತ್ತಿರವಾಗಿರುವ ಸ್ಪರ್ಧಾತ್ಮಕ ಜೀವನ–ಸೋಶಿಯಲ್ ಮೀಡಿಯಾ ಸಂಸ್ಕೃತಿ–ಹಾಸ್ಯಾಸ್ಪದ ಪರಿಸ್ಥಿತಿಗಳನ್ನು ಒಟ್ಟುಗೂಡಿಸಿ ಸಿನಿಮಾ ರೂಪಿಸಿದ್ದಾರೆ. ಈ ಕುರಿತಂತೆ ನಿರ್ದೇಶಕರು ಚಿತ್ರದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ಪ್ರೇಕ್ಷಕರನ್ನು ಬೆರಗಾಗಿಸುವ ಸನ್ನಿವೇಶ ಇದ್ದು ಥ್ರಿಲ್ + ಕಾಮಿಡಿ ಜಂಟಿಯಾಗಿ ನೀಡುವ ರೀತಿಯಲ್ಲಿ ಸಂಯೋಜನೆ ಮಾಡಲಾಗಿದೆ ಎಂದಿದ್ದಾರೆ.
ಗಮನಸೆಳೆದ ನಟನಟಿಯರ ಪರ್ಫಾರ್ಮೆನ್ಸ್ : ಚಿತ್ರದಲ್ಲಿ ಯುವ ನಟ ಗಿಲ್ಲಿ ಮತ್ತು ಕಾಂಟೆಂಟ್ ಕ್ರಿಯೇಟರ್–ಕಾಮಿಡಿ ಸ್ಟಾರ್ ಗೌರವ್ ಶೆಟ್ಟಿ ಜೋಡಿಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ಬಾಡಿ ಲ್ಯಾಂಗ್ವೇಜ್, ಕಾಮಿಡಿ ಟೈಮಿಂಗ್, ಹಾಗೂ ಫನ್-ಎನರ್ಜಿ ಟೀಸರ್‌ನಲ್ಲೇ ಟ್ರೆಂಡಿಂಗ್ ಆಗಿದೆ.
ತಾರಾಗಣ: ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟಿನಿಸ್ ಕೃಷ್ಣ, ಕರಿಸುಬ್ಬು, ಸೋಮಶೇಖರ್, ವಂಶಿ, ಮಂಜಣ್ಣ, ಬಿ.ಎನ್ ಮಂಗಳ, ಅಶ್ವಿನಿ ರಾವ್, ಸ್ವಪ್ನ ಶೆಟ್ಟಿಗಾರ್, ಮಂಗಳೂರು ಮೀನನಾಥ ಮುಂತಾದವರ ತಾರಾಗಣವಿದೆ
ತಾಂತ್ರಿಕ ತಂಡ: ವಿಜಯಲಕ್ಷ್ಮಿ ಎಂಟರ್‌ಪ್ರೈಸಸ್ ಬ್ಯಾನರಿನಡಿಯಲ್ಲಿ ಜಿ. ಉಮೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾಗೇಂದ್ರ ಪ್ರಸಾದ್ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಇನ್ನುಳಿದಂತೆ, ಆರ್.ಡಿ ನಾಗಾರ್ಜುನ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.
ಟೀಸರ್ ನೋಡುಗರ ಮೆಚ್ಚುಗೆ ಪಡೆದದ್ದು ಯಾಕೆ?: ಟೀಸರ್ ಬಂದ ಕೆಲವೆ ಹೊತ್ತಿನಲ್ಲಿ ಯೂಟ್ಯೂಬ್ ಮತ್ತು ಸೋಶಿಯಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೈರಲ್ ಆಗುತ್ತಿದೆ. ನೋಡುಗರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಮಂಡ್ಯ – ಮಂಗಳೂರು ಫ್ಲೇವರ್ ಮಿಕ್ಸ್. ಗಿಲ್ಲಿ–ಗೌರವ್ ಶೆಟ್ಟಿ–ಪ್ರಮೋದ್ ಶೆಟ್ಟಿ ಮೂವರ ಕಾಮಿಡಿ ಬಾಡಿ ಲ್ಯಾಂಗ್ವೇಜ್. ಸಾಧು ಕೋಕಿಲನ ಕಾಮಿಡಿ ಎಕ್ಸ್‌ಪ್ರೆಷನ್ ಹಾಗೂ ಡ್ರ್ಯಾಗನ್ ಮಂಜುವಿನ ಥ್ರಿಲ್ಲಿಂಗ್ ಸ್ಟೈಲ್ ಹೈ ಎನರ್ಜಿಕ್ ಎಂಟ್ರಿ ಸೀನ್ಸ್ ಮತ್ತು ಮೋಜಿನ ಸನ್ನಿವೇಶಗಳ ಮೂಲಕ ಯಶಸ್ಸಿನತ್ತ ಸಾಗಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಹೊಸ ಕಾಮಿಡಿ ಸಂಭ್ರಮ?: ಕನ್ನಡದಲ್ಲಿ ಕಾಮಿಡಿ ಚಿತ್ರಗಳ ಸಂಖ್ಯೆ ಕಡಿಮೆಯಾಗಿರುವ ಸಮಯದಲ್ಲಿ,‘ಸೂಪರ್ ಹಿಟ್’ ಸಿನಿಮಾ ನಿಜಕ್ಕೂ ಹೊಸ ಸೊಗಡಿನ ಮೂಲಕ ಯುವ ಸಮುದಾಯಕ್ಕೆ ಹತ್ತಿರವಾಗಲಿದ್ದು. ಫುಲ್-ಆನ್ ಮನರಂಜನೆ ನೀಡುವ ಕಾಮಿಡಿ–ಥ್ರಿಲ್ಲರ್ ಆಗಿ ಬರುತ್ತಿದೆ.
ಟೀಸರ್ ಬಿಡುಗಡೆಯೊಂದಿಗೆ ಸಿನಿಮಾದ ಮೇಲೆ ಈಗಾಗಲೇ ಪಾಸಿಟಿವ್ ಬಜ್ ಶುರುವಾಗಿದ್ದು, ಬಿಡುಗಡೆಯ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ.
