ಬಿಗ್ ಬಾಸ್ ಕನ್ನಡ ಸೀನಸ್-12 ಆರಂಭಕ್ಕೆ ಪ್ರೇಕ್ಷಕರು ದಿನಗಣನೆ ಶುರು ಮಾಡಿದ್ದಾರೆ. ಇದರ ಮಧ್ಯೆ ಯಾರೆಲ್ಲ ಬಿಗ್ ಬಾಸ್ ಮನೆಗೆ ಹೋಗುತ್ತಾರೆ ಎಂದು ತಿಳಿದುಕೊಳ್ಳುವ ಕುತೂಹಲವಂತೂ ಹೆಚ್ಚಾಗಿದೆ. ಇದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಹಲವಾರು ಹೆಸರಗಳು ಹರಿದಾಡುತ್ತಿವೆ.
ಯಾರು ದೊಡ್ಮನೆಗೆ ಬರುತ್ತಾರೆ ಎಂಬುದರ ಬಗ್ಗೆ ಹಲವಾರ ಹೆಸರುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ. ಇನ್ನ ಮತ್ತೊಂದಿಷ್ಟು ಹೊಸ ಹೆಸರುಗಳು ಈಗ ಪಟ್ಟಿಗೆ ಸೇರ್ಪಡೆಯಾಗಿವೆ. ಹೀಗೆ ವೈರಲ್ ಆಗುವ ಹೆಸರುಗಳಲ್ಲಿ ಒಂದಿಷ್ಟು ಹೆಸರುಗಳು ಕೂಡ ನಿಜವಾಗಿರುವುದು ಉಂಟು.
ಕಂಟೆಸ್ಟೆಂಟ್ ಲಿಸ್ಟ್ ವೈರಲ್: ಸೆಪ್ಟೆಂಬರ್ 28 ರಿಂದ ಆರಂಭವಾಗಲಿರುವ ಆಟದಲ್ಲಿ ಮನೆಯೊಳಗೆ ಹೋಗುವ ಸ್ಪರ್ಧಿಗಳು ಯಾರು? ಎನ್ನುವ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ಸಹಜವಾಗಿದೆ. ಅಲ್ಲದೇ ಸದ್ಯ ಮತ್ತೊಂದು ಪಟ್ಟಿಯೊಂದು ವೈರಲ್ ಆಗಿದ್ದು ಇವರೇ ಬಿಗ್ ಬಾಸ್ ಸೀಸನ್ 12ರ ಸ್ಪರ್ಧಿಗಳು ಎಂದು ಹೇಳಲಾಗುತ್ತಿದೆ. ಈ ಪಟ್ಟಿಯಲ್ಲಿ ಯಾರೆಲ್ಲ ಹೆಸರಿದೆ, ಎನ್ನುವ ವಿವರ ಇಲ್ಲಿದೆ ನೋಡಿ.
ಮೇಘಾ ಶೆಟ್ಟಿ: ಕನ್ನಡ ಕಿರುತರೆಯಲ್ಲಿ ಜೊತೆ ಜೊತೆಯಲಿ ಸೀರಿಯಲ್ ಮೂಲಕ ಮನೆಮಾತಾಗಿರುವ ಮೇಘಾ ಶೆಟ್ಟಿ ಈ ಬಾರಿಯ ಬಿಗ್ ಬಾಸ್ ಮನೆಗೆ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೇ ಅವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ಕೂಡ ಹರಿದಾಡಿತ್ತು.
ಸುಧಾರಾಣಿ: ವೈರಲ್ ಆದ ಪಟ್ಟಿಯಲ್ಲಿ ಸುಧಾರಾಣಿ ಹೆಸರು ಇದೆ. ಆದರೆ ಇದಕ್ಕೆ ಸುಧಾರಾಣಿ ಈಗಾಗಲೇ ವಿಡಿಯೋ ಮೂಲಕವೇ ಉತ್ತರ ಕೊಟ್ಟಿದ್ದಾರೆ. “ಯಾರು ಹೇಳಿದ್ದು ನಾನು ಹೋಗ್ತೀನಿ ಅಂತ, ಸಾಕ್ಷಿ ಏನಿದೆ?” ಎನ್ನುವ ವಿಡಿಯೋವನ್ನು ಸುಧಾರಾಣಿ ಹಂಚಿಕೊಂಡಿದ್ದರು.
ಶ್ವೇತಾ ಪ್ರಸಾದ್: ಕನ್ನಡ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸಿರುವ ಶ್ವೇತಾ ಪ್ರಸಾದ್ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಬಿಗ್ ಬಾಸ್ ಮನೆಗೆ ಶ್ವೇತಾ ಹೋಗುವುದು ನಿಜವೋ ಅಥವಾ ಸುಳ್ಳೋ ಎನ್ನುವುದಕ್ಕೆ ಅವರೇ ಉತ್ತರ ನೀಡಬೇಕಿದೆ.
ಅನನ್ಯ ಅಮರ್: ಅಂಕಿತಾ ಅಮರ್ ಅವರ ಸಹೋದರಿ ನಟಿ ಅನನ್ಯ ಅಮರ್ ಈ ಬಾರಿಯ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿರುವ ಅನನ್ಯ ಹಲವು ತಾರೆಯರ ಸಂದರ್ಶನಗಳನ್ನ ಮಾಡಿದ್ದಾರೆ
ಹುಲಿ ಕಾರ್ತಿಕ್: ಬಿಗ್ ಬಾಸ್ ಮನೆಗೆ ಹೋಗುವವ ಪಟ್ಟಿಯಲ್ಲಿ ಹುಲಿ ಕಾರ್ತಿಕ್ ಹೆಸರು ಕಾಣಿಸಿಕೊಂಡಿದೆ. ಮಜಾಭಾರತ, ಗಿಚ್ಚಿ ಗಿಲಿಗಿಲಿ ಮೂಲಕ ಜನರನ್ನು ನಗಿಸುತ್ತ ಬಂದಿರುವ ಕಾರ್ತಿಕ್ ಈ ಬಾರಿ ದೊಡ್ಮನೆಯಲ್ಲಿ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೌನಾ ಗುಡ್ಡೇಮನೆ: ಚಾರುಲತಾ ಖ್ಯಾತಿಯ ಮೌನಾ ಗುಡ್ಡೇಮನೆ ಅವರ ‘ರಾಮಾಚಾರಿ’ ಧಾರಾವಾಹಿ ಮುಕ್ತಾಯವಾಗಲಿದ್ದು, ‘ಬಿಗ್ ಬಾಸ್’ ಮನೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರೇಯಸ್ ಮಂಜು: ನಿರ್ಮಾಪಕ ಕೆ ಮಂಜು ಅವರ ಪುತ್ರ ಯುವ ನಾಯಕ ನಟ ಶ್ರೇಯಸ್ ಮಂಜು ದೊಡ್ಮನೆಗೆ ಬರಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈಗಾಗಲೇ ಕೆಲ ಚಿತ್ರಗಳಲ್ಲಿ ನಟಿಸುತ್ತಿರುವ ಅವರು ಸ್ಪರ್ಧೆಗೆ ಬರುವುದು ಖಚಿತ ಎನ್ನುವ ಬಗ್ಗೆ ಸ್ಪಷ್ಟನೆ ಇಲ್ಲ.
ಸಮರ್ಜಿತ್ ಲಂಕೇಶ್: ನಿರ್ದೇಶಕ ಮತ್ತು ನಿರ್ಮಾಪಕ ಇಂದ್ರಜಿತ್ ಲಂಕೇಶ್ ಅವರ ಪುತ್ರ ಸಮರ್ಜಿತ್ ಲಂಕೇಶ್ ಹೆಸರು ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳ ಪಟ್ಟಿಯಲ್ಲಿದೆ.