ಕಾರವಾರ: ಶಿವಮೊಗ್ಗ ಜಿಲ್ಲೆಯ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಜಲಾಶಯದಲ್ಲಿ ಮಳೆ ಹಿನ್ನಲೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, 11 ಕ್ರಸ್ಟ್ ಗೇಟ್‌ಗಳನ್ನು ಮೇಲೆತ್ತಿ 15 ಸಾವಿರ ಕ್ಯೂಸೆಕ್ ನೀರು ಶರಾವತಿ ನದಿಗೆ ಬಿಡುಗಡೆ ಮಾಡಲಾಗಿದೆ.
ನಿನ್ನೆ ದಿನ ಜಲಾಶಯ ಶೇ. 93.87 ರಷ್ಟು ಭರ್ತಿಯಾಗಿದ್ದು, 142.33 ಟಿ.ಎಂ.ಸಿ ನೀರು ಸಂಗ್ರಹವಾಗಿತ್ತು. ಈ ನಡುವೆ ಒಳ ಹರಿವು 48,393 ಕ್ಯೂಸೆಕ್ ಆಗಿತ್ತು. ಹೆಚ್ಚುವರಿ ನೀರಿನ ಹರಿವನ್ನು ನಿಯಂತ್ರಿಸಲು ಗೇಟ್‌ಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೀರು ಬಿಡುಗಡೆ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಭಾಗದ ನದಿ ಪಾತ್ರದ ಜನರಿಗೆ ಅಲರ್ಟ್ ನೀಡಲಾಗಿದ್ದು, ತಗ್ಗು ಪ್ರದೇಶದ ಜನರು ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದೆ.