Home ನಮ್ಮ ಜಿಲ್ಲೆ ಉತ್ತರ ಕನ್ನಡ ಉತ್ತರ ಕನ್ನಡ: ಸಮುದ್ರವನ್ನು ತ್ಯಾಜ್ಯ ಮುಕ್ತಗೊಳಿಸುವುದು ಎಲ್ಲರ ಜವಾಬ್ದಾರಿ

ಉತ್ತರ ಕನ್ನಡ: ಸಮುದ್ರವನ್ನು ತ್ಯಾಜ್ಯ ಮುಕ್ತಗೊಳಿಸುವುದು ಎಲ್ಲರ ಜವಾಬ್ದಾರಿ

0

ದಾಂಡೇಲಿ: ಸಮುದ್ರದಲ್ಲಿನ ಪ್ಲಾಸ್ಟಿಕ್ ತ್ಯಾಜ್ಯವನ್ನು ಮೀನು ಮತ್ತಿತರ ಕಡಲ ಜೀವಿಗಳು ಸೇವಿಸುವುದರಿಂದ, ಆಹಾರಕ್ಕಾಗಿ ಇವುಗಳನ್ನು ಉಪಯೋಗಿಸುವ ಮಾನವನ ಆರೋಗ್ಯದ ಮೇಲೆಯೂ ಇದರ ದುಷ್ಟರಿಣಾಮಗಳು ಉಂಟಾಗುತ್ತಿದ್ದು, ಸಮುದ್ರ ಮತ್ತು ಸಮುದ್ರ ತೀರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಹೇಳಿದರು.

ಕಾರವಾರದ ರವೀಂದ್ರನಾಥ ಠಾಗೂರ್ ಬೀಚ್‌ನಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ವತಿಯಿಂದ, ಅಂತಾರಾಷ್ಟೀಯ ಕಡಲ ತೀರ ಸ್ವಚ್ಛತಾ ದಿನದ ಅಂಗವಾಗಿ ಆಯೋಜಿಸಿದ್ದ ಬೀಚ್ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಗತ್ತಿನ ಜೀವಿಗಳ ಉದಯ ಸಮುದ್ರದಿಂದಲೇ ಆಗಿದೆ. ಆದರೆ ಪ್ರಸ್ತುತ ಮಾನವನಿಂದಲೇ ಸಮುದ್ರವು ಅತಿ ಹೆಚ್ಚು ಮಲೀನಗೊಳ್ಳುತ್ತಿದೆ. ಸಮುದ್ರಕ್ಕೆ ಸೇರುತ್ತಿರುವ ಮೈಕ್ರೋ ಪ್ಲಾಸ್ಟಿಕ್ ವಸ್ತುಗಳು ಸಮುದ್ರ ಜೀವಿಗಳ ಮೂಲಕ ನಮ್ಮ ಮನೆಗಳಿಗೆ ತಲುಪುತ್ತಿದೆ. ಪ್ಲಾಸ್ಟಿಕ್ ಬಳಕೆ ತಡೆಯುವದು ಯಾವುದೋ ಒಂದು ಇಲಾಖೆಯ ಕರ್ತವ್ಯವಾಗದೇ, ಪ್ರತಿ ಮನೆಗಳಿಂದಲೂ ಸ್ವಚ್ಛತೆಯ ಪಾಠ ಆರಂಭವಾಗಬೇಕು ಎಂದರು.

ಸಮುದ್ರ ತೀರವನ್ನು ಮಲೀನಗೊಳಿಸದೆ, ಸ್ವಚ್ಛತೆಯನ್ನು ಕಾಪಾಡಬೇಕು. ಜಿಲ್ಲೆಯಲ್ಲಿ ಸೆಪ್ಟಂಬರ್ 17 ರಿಂದ ಅಕ್ಟೋಬರ್ 2ರ ವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಕಾರ್ಯಕ್ರಮ ನಡೆಯುತ್ತಿದ್ದು, ಎಲ್ಲಾ ಇಲಾಖೆಗಳ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದು ಜಿಲ್ಲೆಯಾದ್ಯಂತ ಸ್ವಚ್ಚತಾ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version