ಕೂಲಿ ಕೇಳಲು ಹೋದ ಕಾರ್ಮಿಕನ ಮೇಲೆ ಗುಂಡು ಹಾರಿಸಿದ ಮಾಲೀಕ

ಉತ್ತರ ಕನ್ನಡ (ಯಲ್ಲಾಪುರ): ಅಡಿಕೆ ತೋಟದಲ್ಲಿ ದುಡಿದ ಕೂಲಿ ಕೇಳಲು ಹೋದ ಕಾರ್ಮಿಕನ ಮೇಲೆ ತೋಟದ ಮಾಲೀಕ ಏರ್‌ಗನ್‌ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಘಟನೆ ತಾಲೂಕಿನ ಗುಳ್ಳಾಪುರದಲ್ಲಿ ನಡೆದಿದ್ದು, ಕೈಗೆ ಗುಂಡು ತಗುಲಿ ಗಾಯಗೊಂಡ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಳ್ಳಾಪುರ ನಿವಾಸಿ ನಾಗರಾಜ ಮನೋಹರ ಬಾಂದೇಕರ (41) ಗಾಯಗೊಂಡ ವ್ಯಕ್ತಿಯಾಗಿದ್ದು, ಇವರು ಸುಬ್ರಹ್ಮಣ್ಯ ಮಾದೇವ ಗಾಂವಕರ ಎನ್ನುವವರ ಅಡಿಕೆ ತೋಟದಲ್ಲಿ ಕೂಲಿ ಕೆಲಸ ಮಾಡಿದ್ದರು. ಮೂರು ತಿಂಗಳಿನಿಂದ ಬಾಕಿ ಇದ್ದ ಹಣ ಕೇಳಲು ತೋಟದ ಮಾಲೀಕ, … Continue reading ಕೂಲಿ ಕೇಳಲು ಹೋದ ಕಾರ್ಮಿಕನ ಮೇಲೆ ಗುಂಡು ಹಾರಿಸಿದ ಮಾಲೀಕ