Home ನಮ್ಮ ಜಿಲ್ಲೆ ಉತ್ತರ ಕನ್ನಡ ಅಂಕೋಲಾ: ಪುರಸಭೆ ಮುಖ್ಯಾಧಿಕಾರಿ, ಜ್ಯೂನಿಯರ್ ಇಂಜೀನಿಯರ ಅಮಾನತು

ಅಂಕೋಲಾ: ಪುರಸಭೆ ಮುಖ್ಯಾಧಿಕಾರಿ, ಜ್ಯೂನಿಯರ್ ಇಂಜೀನಿಯರ ಅಮಾನತು

0

ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪುರಸಭೆಯ ಮುಖ್ಯಾಧಿಕಾರಿ ಎಚ್. ಅಕ್ಷತಾ, ಜ್ಯೂನಿಯರ್ ಇಂಜೀನಿಯರ್ ಶೈಲಜಾ ಎಸ್.ನಾಯ್ಕ ಅವರನ್ನು ಕರ್ತವ್ಯ ಲೋಪ ಮತ್ತು ಹಣಕಾಸು ದುರುಪಯೋಗದ ಆರೋಪದ ಮೇಲೆ ಪೌರಾಡಳಿತ ನಿರ್ದೇಶಕರಾದ
ಪ್ರಭುಲಿಂಗ ಕವಳಿಕಟ್ಟಿ ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.

ಇವರ ವಿರುದ್ಧ ಪುರಸಭಾಧ್ಯಕ್ಷ ಸೂರಜ ನಾಯ್ಕ ಮತ್ತು 19 ಪುರಸಭಾ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮತ್ತು ನಗರಾಭಿವೃದ್ಧಿ ಕೋಶಕ್ಕೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ವಿಚಾರಣೆ ನಡೆಸಿ ಪ್ರಾಥಮಿಕ ಹಂತದಲ್ಲಿ ಅಧಿಕಾರ ದುರುಪಯೋಗ ಹಾಗೂ ಆರ್ಥಿಕ ಅವ್ಯವಹಾರ ಎಸಗಿರುವ ಕುರಿತು ಪೌರಾಡಳಿತ ನಿರ್ದೆಶನಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ವಿಚಾರಣೆಯನ್ನು ಕಾದಿರಿಸಿ ಪೌರಾಡಳಿತ ನಿರ್ದೇಶಕರು ಅಮಾನತುಗೊಳಿಸಿ ಆದೇಶ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version