ಪ್ರಯಾಣಿಕರ ಗಮನಕ್ಕೆ: ಜುಲೈ 25ರಿಂದ ರೈಲುಗಳ ಸಮಯ ಪರಿಷ್ಕರಣೆ

ಹುಬ್ಬಳ್ಳಿ: ನೈಋತ್ಯ ರೈಲ್ವೆ ವ್ಯಾಪ್ತಿಯ 6 ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಹೊಸ ಸಮಯ ಜುಲೈ 25 ರಿಂದ ಹಂತಹಂತವಾಗಿ ಜಾರಿಗೆ ಬರಲಿದೆ. ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಜೋಧಪುರ-ಕೆಎಸ್‌ಆರ್ ಬೆಂಗಳೂರು ದ್ವಿ-ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20693 ಜುಲೈ 25ರಿಂದ ಘಟಪ್ರಭಾ ನಿಲ್ದಾಣಕ್ಕೆ 08.28ಕ್ಕೆ ಆಗಮಿಸಿ 08.30ಕ್ಕೆ ಹೊರಡಲಿದೆ. ಈ ಹಿಂದೆ 08.43ಕ್ಕೆ ಬರುತ್ತಿತ್ತು. ಬೆಳಗಾವಿ ನಿಲ್ದಾಣಕ್ಕೆ ಈ ರೈಲು 09.35ಕ್ಕೆ ಆಗಮಿಸಿ 09.40ಕ್ಕೆ ನಿರ್ಗಮಿಸಲಿದೆ. ಕೆಎಸ್‌ಆರ್ ಬೆಂಗಳೂರು-ಗಾಂಧಿಧಾಮ್ ಸಾಪ್ತಾಹಿಕ ಸೂಪರ್‌ಫಾಸ್ಟ್ ರೈಲು ಸಂಖ್ಯೆ 20686 … Continue reading ಪ್ರಯಾಣಿಕರ ಗಮನಕ್ಕೆ: ಜುಲೈ 25ರಿಂದ ರೈಲುಗಳ ಸಮಯ ಪರಿಷ್ಕರಣೆ