ಮೈಸೂರು ದಸರಾ 2025ರ ಹಿನ್ನಲೆಯಲ್ಲಿ ಜನರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಿಶೇಷ ರೈಲುಗಳನ್ನು ಓಡಿಸುತ್ತಿದೆ. ಕಾಯ್ದಿರಿಸದ ರೈಲುಗಳು ಇದಾಗಿದ್ದು, ದಸರಾ ನೋಡಲು ಹೋಗುವ ಜನರು ರೈಲು ಸೇವೆ ಉಪಯೋಗ ಪಡೆದುಕೊಳ್ಳಬಹುದು.
ನೈಋತ್ಯ ರೈಲ್ವೆ ಅರಸೀಕೆರೆ-ಮೈಸೂರು-ಅರಸೀಕೆರೆ. ಮೈಸೂರು-ಚಾಮರಾಜನಗರ-ಮೈಸೂರು ನಡುವೆ ವಿಶೇಷ ಮೆಮು ರೈಲುಗಳನ್ನು ಓಡಿಸುತ್ತಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ವೇಳಾಪಟ್ಟಿ ವಿವರ
- ಅರಸೀಕೆರೆ-ಮೈಸೂರು-ಅರಸೀಕೆರೆ ಕಾಯ್ದಿರಿಸದ ವಿಶೇಷ ಮೆಮು ರೈಲು (6 ಟ್ರಿಪ್‌ಗಳು). ರೈಲು ಸಂಖ್ಯೆ 06295 ಅರಸೀಕೆರೆ-ಮೈಸೂರು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2ರ ತನಕ ಸಂಚಾರ ನಡೆಸಲಿದೆ. ಅರಸೀಕೆರೆಯಿಂದ ಮಧ್ಯಾಹ್ನ 2.30ಕ್ಕೆ ಹೊರಟು, ಮೈಸೂರಿಗೆ 6.40ಕ್ಕೆ ತಲುಪುತ್ತದೆ. ರೈಲು ನಂಬರ್ 06296 ಮೈಸೂರು-ಅರಸೀಕೆರೆ ನಡುವಿನ ರೈಲು ಮೈಸೂರಿನಿಂದ ಸಂಜೆ 6.50ಕ್ಕೆ ಹೊರಟು 11.45ಕ್ಕೆ ಅರಸೀಕೆರೆ ತಲುಪಲಿದೆ. ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 2ರ ತನಕ ಸಂಚಾರ.
- ಮೈಸೂರು-ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು. ರೈಲು ಸಂಖ್ಯೆ 06289
ಮೈಸೂರು-ಚಾಮರಾಜನಗರ ರೈಲು 27.09.2025 ರಿಂದ 03.10.2025 ವರೆಗೆ ಸಂಚಾರ ನಡೆಸಲಿದೆ. ರೈಲು 12:10ಕ್ಕೆ ಹೊರಟು, 2 ಗಂಟೆಗೆ ಚಾಮರಾಜನಗರ ತಲುಪಲಿದೆ. ಚಾಮರಾಜನಗರ-ಮೈಸೂರು ರೈಲು 27.09.2025 ರಿಂದ 03.10.2025ರ ತನಕ 02:30 am ಹೊರಟು, 4.15ಕ್ಕೆ ಮೈಸೂರು ತಲುಪಲಿದೆ. (7 ಟ್ರಿಪ್ ಸಂಚಾರ) - ಮೈಸೂರು-ಚಾಮರಾಜನಗರ-ಮೈಸೂರು ಕಾಯ್ದಿರಿಸದ ವಿಶೇಷ ರೈಲು (1 ಟ್ರಿಪ್). ರೈಲು ಸಂಖ್ಯೆ 06293 ಮೈಸೂರು-ಚಾಮರಾಜನಗರ 02.10.2025ರಂದು 09:30 p.m. ಗೆ ಹೊರಟು, 11:20 p.m.ಕ್ಕೆ ಮೈಸೂರು ತಲುಪಲಿದೆ. ರೈಲು ಸಂಖ್ಯೆ 06294 ಚಾಮರಾಜನಗರ-ಮೈಸೂರು ರೈಲು 2.10.2025ಕ್ಕೆ 11.50ಕ್ಕೆ ಹೊರಟು, 1.50ಕ್ಕೆ (ಮರುದಿನ) ತಲುಪಲಿದೆ.
ಕೋಚ್‌ಗಳ ಸಂಯೋಜನೆ. ರೈಲು ಸಂ. 06295/ 06296 ಗಾಡಿಯು 8-ಕಾರ್ ಮೆಮು ರೇಕ್‌ಗಳನ್ನೊಳಗೊಂಡಿದೆ. ರೈಲು ಸಂ. 06289/ 06290 17 ಕೋಚ್‌ಗಳು ಮತ್ತು ರೈಲು ಸಂ. 06293/ 06294 21 ಕೋಚ್‌ಗಳನ್ನು ಒಳಗೊಂಡಿದೆ.
ಮೇಲಿನ ರೈಲುಗಳ ನಿಲುಗಡೆಗಳು ಮತ್ತು ಸಮಯಗಳ ಕುರಿತ ಹೆಚ್ಚಿನ ಮಾಹಿತಿಗಾಗಿ ಅಧೀಕೃತ ವೆಬ್‌ಸೈಟ್ www.enquiry.indianrail.gov.in ಗೆ ಅಥವಾ NTES ಆಪ್ ಮೂಲಕ ಅಥವಾ 139 ಗೆ ಡಯಲ್ ಮಾಡಿ.