Home ನಮ್ಮ ಜಿಲ್ಲೆ ಮೈಸೂರು ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡ ವಿರುದ್ಧ ಅಶ್ಲೀಲ ವಿಡಿಯೋ ಆರೋಪ: ಎಫ್‌ಐಆರ್ ದಾಖಲು

ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡ ವಿರುದ್ಧ ಅಶ್ಲೀಲ ವಿಡಿಯೋ ಆರೋಪ: ಎಫ್‌ಐಆರ್ ದಾಖಲು

0

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿರುವ ಘಟನೆಯೊಂದರಲ್ಲಿ, ಸ್ಥಳೀಯ ಕಾಂಗ್ರೆಸ್ ಮುಖಂಡ ಲೋಹಿತ್ ಅಲಿಯಾಸ್ ರಾಜಿ ಎಂಬುವವರ ವಿರುದ್ಧ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

ತಮ್ಮ ಮಗಳ ಅಶ್ಲೀಲ ವಿಡಿಯೋವನ್ನು ಲೋಹಿತ್ ವೈಯಕ್ತಿಕ ಲಾಭಕ್ಕಾಗಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿ ಮಹಿಳೆಯ ತಂದೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಕೊಲೆ ಬೆದರಿಕೆ ಆರೋಪವೂ ಕೇಳಿಬಂದಿದ್ದು, ಎಫ್‌ಐಆರ್ ದಾಖಲಾಗುತ್ತಿದ್ದಂತೆ ಲೋಹಿತ್ ಪರಾರಿಯಾಗಿದ್ದಾರೆ.

ಪ್ರಕರಣದ ವಿವರಗಳು: ದೂರುದಾರರಾದ ಸೋಮೇಗೌಡ ಬಿನ್ ಲೇಟ್ ಮಲೆಗೌಡ ಅ. 16ರಂದು ರಾತ್ರಿ 9 20 ಕ್ಕೆ ನೀಡಿದ ದೂರಿನಲ್ಲಿ, ತಾನು ವ್ಯವಸಾಯ ಮಾಡಿಕೊಂಡಿದ್ದು, ಇಬ್ಬರು ಮಕ್ಕಳಿದ್ದಾರೆ ಎಂದು ತಿಳಿಸಿದ್ದಾರೆ. ಮೂರು ತಿಂಗಳ ಹಿಂದೆ ಹೊಳೆನರಸೀಪುರ ತಾಲೂಕಿನ ಮರಹಳ್ಳಿ ಗ್ರಾಮದ ವ್ಯಕ್ತಿಯೊಂದಿಗೆ ತಮ್ಮ ಮಗಳಿಗೆ ಮದುವೆ ಮಾಡಿಸಲಾಗಿದ್ದು, ಮಗಳು ಮತ್ತು ಅಳಿಯ ಅನ್ಯೋನ್ಯವಾಗಿದ್ದರು ಎಂದು ಹೇಳಿದ್ದಾರೆ.

ದೀಪಾವಳಿ ಹಬ್ಬದ ನಿಮಿತ್ತ ಮಗಳು ತಮ್ಮ ಮನೆಗೆ ಬಂದಿದ್ದಾಗ, ಅಕ್ಟೋಬರ್ 16ರ ಬೆಳಿಗ್ಗೆ 10 ಗಂಟೆಗೆ ತಮ್ಮ ಸಂಬಂಧಿಕರು ಸಿಕ್ಕಿ, “ನಿಮ್ಮ ಮಗಳು ಮತ್ತು ನಿಮ್ಮೂರಿನ ಲೋಹಿತ್ ಅಲಿಯಾಸ್ ರಾಜಿ ಇಬ್ಬರ ಅಶ್ಲೀಲ ವಿಡಿಯೋ ಮಲ್ಲಿಕಾರ್ಜುನ ಎಂಬುವವರ ವಾಟ್ಸಾಪ್ ನಂಬರ್‌ಗೆ ಬಂದಿದ್ದು, ಆತನು ನನ್ನ ವಾಟ್ಸಾಪ್ ನಂಬರ್‌ಗೆ ಕಳುಹಿಸಿದ್ದಾನೆ. ಏನೆಂದು ವಿಡಿಯೋ ನೋಡಲಾಗಿ ಅದು ನಿಮ್ಮ ಮಗಳ ಮತ್ತು ಲೋಹಿತ್ ಅಶ್ಲೀಲ ವಿಡಿಯೋ ಆಗಿತ್ತು. ಬಳಿಕ ಡಿಲೀಟ್ ಮಾಡಿರುವುದಾಗಿ ನನಗೆ ಹೇಳಿದ್ದಾರೆ” ಎಂದು ತಿಳಿಸಿದ್ದಾರೆ.

ಜಮೀನು ವಿವಾದ ಮತ್ತು ಕೊಲೆ ಬೆದರಿಕೆ: ಸೋಮೇಗೌಡ ತಮ್ಮ ದೂರಿನಲ್ಲಿ, ತಮಗೂ ಮತ್ತು ಲೋಹಿತ್ ಎಂಬುವವರಿಗೂ ಜಮೀನು ದಾರಿ ವಿಚಾರವಾಗಿ ಆಗಾಗ ಗಲಾಟೆಯಾಗುತ್ತಿತ್ತು. ಈ ವೇಳೆ ಲೋಹಿತ್ “ನಿನಗೆ ಮತ್ತು ನಿಮ್ಮ ಕುಟುಂಬಕ್ಕೆ ಒಂದು ಗತಿ ಕಾಣಿಸುತ್ತೇನೆ ನೋಡು, ಒಂದಲ್ಲ ಒಂದು ದಿನ ನಿಮ್ಮನ್ನು ಕೊಲೆ ಮಾಡದೇ ಬಿಡುವುದಿಲ್ಲ” ಎಂದು ಪದೇ ಪದೇ ಬೆದರಿಕೆ ಹಾಕುತ್ತಿದ್ದನು ಎಂದು ಉಲ್ಲೇಖಿಸಿದ್ದಾರೆ.

ಈ ದ್ವೇಷದಿಂದಲೇ ಲೋಹಿತ್ ತಮ್ಮ ಮಗಳ ಮತ್ತು ಕುಟುಂಬದ ಮಾನಮರ್ಯಾದೆಯನ್ನು ಬೀದಿ ಪಾಲು ಮಾಡುವ ಉದ್ದೇಶದಿಂದ ತಮ್ಮ ಮಗಳೊಂದಿಗೆ ಇದ್ದ ವಿಡಿಯೋವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡು ಎಲ್ಲರಿಗೂ ವಾಟ್ಸಾಪ್‌ನಲ್ಲಿ ಕಳುಹಿಸಿ, ಮಗಳ ಮತ್ತು ಕುಟುಂಬದ ಸಂಸಾರವನ್ನು ಹಾಳು ಮಾಡಿರುತ್ತಾನೆ ಎಂದು ಆರೋಪಿಸಿದ್ದಾರೆ. ಆದ್ದರಿಂದ, ಲೋಹಿತ್ ಅಲಿಯಾಸ್ ರಾಜಿ ಎಂಬುವವರ ಮೇಲೆ ಕಾನೂನು ಕ್ರಮ ಜರುಗಿಸಿ ತಮಗೆ ಮತ್ತು ತಮ್ಮ ಮಗಳಿಗೆ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version