Home ನಮ್ಮ ಜಿಲ್ಲೆ ಕಲಬುರಗಿ ಬಸವಸಾಗರ: ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಶ್ರೀಛಾಯಾ ಕ್ಷೇತ್ರ

ಬಸವಸಾಗರ: ಪ್ರವಾಸಿಗರನ್ನು ಕೈ ಬೀಸಿ ಕರೆಯುವ ಶ್ರೀಛಾಯಾ ಕ್ಷೇತ್ರ

0

ಹುಣಸಗಿ: ಬಸವಸಾಗರ ಜಲಾಶಯ ಕಳೆದ ಹತ್ತಾರುದಿನಗಳಿಂದ ದುಮ್ಮಿಕ್ಕಿ ಹರಿಯುತ್ತಿದೆ. ಭೋರ್ಗರೆಯುವ ನೀರನ್ನು ನೋಡಲು ಪ್ರವಾಸಿಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮುಂಜಾಗ್ರತ ಕ್ರಮವಾಗಿ ನದಿಯ ದಡದ ಹತ್ತಿರ ಹೋಗುವುದನ್ನು ನಿಷೇಧಿಸಲಾಗಿದೆ. ಆದರೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀಛಾಯಾಕ್ಷೇತ್ರಕ್ಕೆ ಬೇಟಿ‌ ಕೊಡುತ್ತಿರುವುದು ವಿಷೇಶವಾಗಿದೆ.

ಮೈತುಂಬಿ ಹರಿಯುವ ಕೃಷ್ಣೆಯ ಮನಮೋಹಕ ದೃಶ್ಯದಲ್ಲಿ ಪೃಕೃತಿಯ ಸೌಂದರ್ಯದ ನಡುವೆ ಕೃಷ್ಣೆಯ ಒಡಲಿನಲ್ಲಿ ಬೃಹತ್ತಾದ ಕಲ್ಲು ಬಂಡೆಗಳ ನಡುವೆ ವಿರಾಜಮಾನಳಾದ ಶ್ರೀಛಾಯಾದೇವಿಯರ ಸನ್ನಿಧಿ ಮತ್ತು ಬಸವಸಾಗರ ಜಲಾಶಯದಿಂದ ನದಿಗೆ ಹಲವಾರು ಬಂಡೆಗಳ ಕವಲುಗಳ ಮೂಲಕ ಹರಿದು ಬರುತ್ತಿರುವ ಮೈರೊಮಾಂಚನ ಗೊಳಿಸುವ ಚಿಕ್ಕ ಚಿಕ್ಕ ಜಲಪಾತಗಳೊಂದಿಗೆ ಭೊರ್ಗೆರೆದು ಮುನ್ನುಗ್ಗುವ ನೋಡಿ ಆನಂದಿಸಲು ಬರುತ್ತಿರುವ ಪ್ರವಾಸಿಗರಿಗೆ ಮನಸೆಳೆಯುತ್ತಲಿದೆ ಶ್ರೀ ಛಾಯಾಕ್ಷೇತ್ರ.

ಬರುವ ಪ್ರವಾಸಿಗರಿಗೆ ದೇವಿಯ ವಿರಾಜಮಾನರಾದ ಸ್ಥಳದ ಮಹಿಮೆಯ ಬಗ್ಗೆ ಅರ್ಚಕರಾದ ಶ್ರೀ ಚಿದಂಬರ ಜೋಶಿ ಕೊಡೇಕಲ್ ಅವರು ವಿಸ್ತಾರವಾಗಿ ತಿಳಿಸಿ ಬರುವ ಜನರಲ್ಲಿ‌ ಭಕ್ತಿ ಬಗ್ಗೆ ತಿಳಿಸುತ್ತಿರುವುದು ದೃಶ್ಯ ಸಾಮನ್ಯವಾಗಿ ಕಂಡುಬರುತ್ತಲಿತ್ತು. ಹೊಂಗಾರ್ಡನವರು ಪ್ರವಾಸಿಗರಿಗೆ ನದಿದಡಕ್ಕೆ ತೆರಳದಂತೆ ಹೊಂಗಾರ್ಡ ಎಚ್ಚರಿಕೆ ನೀಡುತ್ತಿರುವುದು ಕಂಡುಬರುತ್ತಿತ್ತು.

Exit mobile version