Home ನಮ್ಮ ಜಿಲ್ಲೆ ಗದಗ ಗದಗ: ಪೊಲೀಸರ ಸುಪರ್ದಿಯಲ್ಲಿ ಗಣೇಶನ ಮೂರ್ತಿ ವಿಸರ್ಜನೆ, ತನಿಖೆಗೆ ಆದೇಶ

ಗದಗ: ಪೊಲೀಸರ ಸುಪರ್ದಿಯಲ್ಲಿ ಗಣೇಶನ ಮೂರ್ತಿ ವಿಸರ್ಜನೆ, ತನಿಖೆಗೆ ಆದೇಶ

0

ಗದಗ: ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಹಾಸ್ಟೆಲ್‌ನಲ್ಲಿ ಗಣೇಶ್ ಹಬ್ಬ ಆಚರಣೆಗೆ ಸಂಬಂಧಿಸಿದಂತೆ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ವಾರ್ಡನ್ ನಡುವೆ ತೀವ್ರ ಗಲಾಟೆಗೆ ಸಂಬಂಧಿಸಿದಂತೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಆದೇಶಿಸಿದ್ದಾರೆ.

ಪೊಲೀಸರ ಸುಪರ್ದಿಯಲ್ಲಿ ತಡರಾತ್ರಿ ಗಣೇಶನನ್ನು ವಿಸರ್ಜನೆ ಮಾಡಿದ್ದ ವಸತಿ ನಿಲಯದ ವಾರ್ಡನ್ ರಿಯಾಜ್ ಅಗರಖೇಡ್ ಎಂಬುವವರನ್ನು ಎತ್ತಂಗಡಿ ಮಾಡಿದ್ದು; ವಾರ್ಡನ್ ಆಗಿ ರೋಣ ತಾಲೂಕ ಕೌಜಗೇರಿ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ ವಸತಿ ನಿಲಯದ ವಾರ್ಡನ್ ರಂಗಪ್ಪ ಓಲೇಕಾರ ಅವರಿಗೆ ಪ್ರಭಾರ ವಹಿಸಲಾಗಿದೆ.

ಕಳಸಾಪೂರ ರಸ್ತೆಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಹಾಸ್ಟೆಲ್‌ನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಯನ್ನು ಪ್ರತಿವರ್ಷದಂತೆ ಮೂರು ದಿನಗಳ ಕಾಲ ಮಾಡದೇ ಒಂದೇ ದಿನಕ್ಕೆ ವಿಸರ್ಜನೆ ಮಾಡಿದ್ದ ವಸತಿ ನಿಲಯದ ವಾರ್ಡನ್ ರಿಯಾಜ್ ಅಗರಖೇಡ್ ವಿರುದ್ಧ ವಿದ್ಯಾರ್ಥಿಗಳು ಬಂಡೆದಿದ್ದರು. ವಾರ್ಡನ್ ಹಿಂದೂ ಹಬ್ಬಗಳನ್ನು ಆಚರಣೆ ಮಾಡದಂತೆ ಕಿರುಕುಳ ನೀಡುತ್ತಿದ್ದನೆಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

ಈ ಮಧ್ಯೆ ವಸತಿ ನಿಲಯದ ವಾರ್ಡನ್ ರಿಯಾಜ್ ಅಗರಖೇಡ್ ಪೊಲೀಸರ ಸುಪರ್ದಿಯಲ್ಲಿ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡಿದ್ದರಿಂದ ವಿದ್ಯಾರ್ಥಿಗಳು ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದರು.

“ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಹಾಸ್ಟೆಲ್ ನಿಲಯ ಪಾಲಕ ರಿಯಾಜ್ ಅಗರಖೇಡ್ ಅವರನ್ನು ವಿದ್ಯಾರ್ಥಿಗಳ ದೂರಿನ ಮೇಲೆ ಮತ್ತೊಂದು ವಸತಿ ನಿಲಯಕ್ಕೆ ವರ್ಗಾಯಿಸಲಾಗಿದೆ. ವಾರ್ಡನ್ ಕ್ರಮದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಲಾಗುವುದು” ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ನಂದಾ ಹನಬರಹಟ್ಟಿ ಹೇಳಿದ್ದಾರೆ.

ಏನಿದು ಘಟನೆ?: ಡಾ. ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಹಾಸ್ಟೆಲ್‌ನಲ್ಲಿ ಪ್ರತಿ ವರ್ಷ ಮೂರು ದಿನಗಳ ಕಾಲ ಗಣೇಶ ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುತ್ತಿದ್ದರು. ವಸತಿ ನಿಲಯದ ವಾರ್ಡನ್ ರಿಯಾಜ್ ಅಗರಖೇಡ್ ಈ ವರ್ಷ ಕೇವಲ ಒಂದು ದಿನಕ್ಕೆ ಮಾತ್ರ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಕೋಪಗೊಂಡಿದ್ದು, ಮೂರು ದಿನ ಗಣೇಶನನ್ನು ಕೂಡಿಸಲು ಪಟ್ಟು ಹಿಡಿದಿದ್ದಾರೆ. ಈ ವಿಚಾರಕ್ಕೆ ವಿದ್ಯಾರ್ಥಿಗಳು ಹಾಗೂ ವಾರ್ಡನ್ ನಡುವೆ ಮಾತಿನ ಚಕಮಕಿ ನಡೆದಿದೆ. ಪೊಲೀಸರು ಆಗಮಿಸಿ ಕೆಲ ವಿದ್ಯಾರ್ಥಿಗಳಿಗೆ ಲಾಠಿಯಿಂದ ಬಿಸಿ ಮುಟ್ಟಿಸಿದ್ದಾರೆನ್ನಲಾಗಿದೆ. ಪೊಲೀಸರ ಭದ್ರತೆಯಲ್ಲಿ ಹಾಸ್ಟೆಲ್ ವಾರ್ಡನ್ ರಿಯಾಜ್ ಗಣೇಶ ವಿಸರ್ಜನೆ ಮಾಡಿ ಬಂದಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version