ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ

ದಾವಣಗೆರೆ: ಬಿಜೆಪಿ ಮುಖಂಡರು ನಡೆಸುತ್ತಿರುವ ಪಾದಯಾತ್ರೆಗೂ ಅಡಿಕೆ ಬೆಳೆಗಾರರ ಸಮಸ್ಯೆಗೂ ಯಾವುದೇ ಸಂಬಂಧವಿಲ್ಲ. ಅದು ಕೇವಲ ಅವರ ಆರೋಗ್ಯ ಸುಧಾರಣೆಗಾಗಿ ನಡೆಸುತ್ತಿರುವ ವಾಕಿಂಗ್ ಅಷ್ಟೇ ಎಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ವ್ಯಂಗ್ಯವಾಡಿದರು. ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಡಿಕೆ ಬೆಳೆಗಾರರ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆಯೇ ಇಲ್ಲ. ರೈತರ ಮತದಿಂದ ತಾವು ಶಾಸಕರಾಗಿದ್ದು, ಅಡಿಕೆ ಬೆಳೆಗಾರರಿಗೆ ಯಾವುದೇ ಅನ್ಯಾಯವಾದರೂ ಅವರ ಪರವಾಗಿ ಮೊದಲಿಗೆ ಧ್ವನಿ ಎತ್ತಲು ಸಿದ್ಧ ಎಂದು ಹೇಳಿದರು. ಗುಟ್ಕಾ ನಿಷೇಧ ಹೊಸ … Continue reading ಬಿಜೆಪಿ ಪಾದಯಾತ್ರೆ ಅಡಿಕೆ ಬೆಳೆಗಾರರಿಗಾಗಿ ಅಲ್ಲ, ಆರೋಗ್ಯ ಸುಧಾರಣೆಗಾಗಿ ನಡಿಗೆ