ದೇವಿ ಚಿನ್ನ ಕದ್ದು ಮಾರಾಟ ಮಾಡಿದ ಪೂಜಾರಿ, ವಿಡಿಯೋ ವೈರಲ್‌

ದಾವಣಗೆರೆ: ಮಧ್ಯ ಕರ್ನಾಟಕದ ಆರಾಧ್ಯ ಶಕ್ತಿದೇವತೆಯಾದ ದಾವಣಗೆರೆಯ ಶ್ರೀ ದುರ್ಗಾಂಬಿಕಾ (ದುಗ್ಗಮ್ಮ) ದೇವಸ್ಥಾನದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ದೇವಿಯ ಚಿನ್ನಾಭರಣವನ್ನು ದೇವಸ್ಥಾನದ ಪೂಜಾರಿಯೇ ಕಳವು ಮಾಡಿ ಮಾರಾಟ ಮಾಡಿರುವ ಆರೋಪವು ದೇವಸ್ಥಾನ ಸಮಿತಿಯ ಲೆಕ್ಕಪತ್ರ ಪರಿಶೀಲನೆ ವೇಳೆ ಬಹಿರಂಗಗೊಂಡಿದೆ. ಈ ಸಂಬಂಧ ನಡೆದ ಸಮಿತಿಯ ಸಭೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪ್ರಕರಣ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ಮಾಜಿ ಸಚಿವ … Continue reading ದೇವಿ ಚಿನ್ನ ಕದ್ದು ಮಾರಾಟ ಮಾಡಿದ ಪೂಜಾರಿ, ವಿಡಿಯೋ ವೈರಲ್‌