Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ: ಶಾಮನೂರು ಮನೆ ಕಾಯುವ ಎಸ್ಪಿ – ಶಾಸಕ ಹರೀಶ್ ಟೀಕೆ

ದಾವಣಗೆರೆ: ಶಾಮನೂರು ಮನೆ ಕಾಯುವ ಎಸ್ಪಿ – ಶಾಸಕ ಹರೀಶ್ ಟೀಕೆ

0

ದಾವಣಗೆರೆ: ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಶಾಮನೂರು ಮನೆತನದವರ ಮನೆ ಕಾಯುವ ಪಮೋರಿಯನ್ ನಾಯಿ ಇದ್ದಂತೆ ಎಂದು ಹರಿಹರ ಶಾಸಕ ಬಿ.ಪಿ. ಹರೀಶ್ ಕಟುವಾಗಿ ಟೀಕಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ಎಸ್ಪಿ ಯಾವ ಶಾಸಕರಿಗೂ ಗೌರವ ಕೊಡುವುದಿಲ್ಲ. ನಾವು ಭಾಗವಹಿಸಿದ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ನಮ್ಮನ್ನು ನೋಡಿ ಮುಖ ತಿರುಗಿಸಿ ಕೂರುತ್ತಾರೆ. ಶಿಷ್ಟಾಚಾರಕ್ಕೂ ಗೌರವ ನೀಡುವುದಿಲ್ಲ ಎಂದು ಎಸ್ಪಿ ಉಮಾ ಪ್ರಶಾಂತ್ ವಿರುದ್ಧ ಹರಿಹಾಯ್ದರು.

ಆದರೆ, ಇಲ್ಲಿನ ಶಾಮನೂರು ಕುಟುಂಬದವರ ಗೇಟ್ ಮುಂದೆ ನಿಂತು ಗಂಟೆಗಟ್ಟಲೆ ಅವರಿಗಾಗಿ ಕಾಯುತ್ತಾರೆ. ಅಧಿಕಾರದಲ್ಲಿರುವವರಿಗೆ ಮಾತ್ರ ಬೆಲೆ ಕೊಡುತ್ತಾರೆ ಎನ್ನಿಸುತ್ತದೆ. ಅಧಿಕಾರ ಶಾಶ್ವತವಲ್ಲ ಎನ್ನುವುದನ್ನು ಎಸ್ಪಿ ಅರಿತುಕೊಂಡು ಜನಪ್ರತಿನಿಧಿಗಳಿಗೆ ನೀಡಬೇಕಾದ ಗೌರವವನ್ನು ನೀಡಬೇಕು ಎಂದರು.

NO COMMENTS

LEAVE A REPLY

Please enter your comment!
Please enter your name here

Exit mobile version