ಬಸ್‌ನಲ್ಲಿ ಕಂಡಕ್ಟರ್ ಹಣದ ಬ್ಯಾಗ್ ಕದ್ದು ಸಿಕ್ಕಿಬಿದ್ದ ಮಹಿಳೆಯ ಹೈಡ್ರಾಮಾ

ಬೆಂಗಳೂರು: ಪ್ರಯಾಣಿಕಳಂತೆ ಬಿಎಂಟಿಸಿ ಬಸ್‌ಗೆ ಹತ್ತಿದ್ದ ಮಹಿಳೆಯೊಬ್ಬಳು ನಿರ್ವಾಹಕರ ಹಣದ ಬ್ಯಾಗ್ ಕಳ್ಳತನ ಮಾಡಲು ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. KA-57 F-6331 ಸಂಖ್ಯೆಯ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ನಿರ್ವಾಹಕರ ಗಮನ ಬೇರೆಡೆ ಇದ್ದ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಮಹಿಳೆ ಹಣದ ಬ್ಯಾಗ್ ಅನ್ನು ತನ್ನ ಚೀಲದಲ್ಲಿ ಅಡಗಿಸಿಕೊಂಡಿದ್ದಾಳೆ ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ಯಾವುದೇ ಅನುಮಾನ ಬಾರದಂತೆ ಬಸ್‌ನಲ್ಲೇ ಸಾಮಾನ್ಯ ಪ್ರಯಾಣಿಕಳಂತೆ ವರ್ತಿಸುತ್ತಿದ್ದಳು. ಆದರೆ ಮಹಿಳೆಯ ನಡೆ-ನುಡಿಯಲ್ಲಿ ಅನುಮಾನಗೊಂಡ ನಿರ್ವಾಹಕರು ಆಕೆಯನ್ನು ಪ್ರಶ್ನಿಸಿದಾಗ, ಸ್ಥಳದಿಂದ ಪರಾರಿಯಾಗಲು … Continue reading ಬಸ್‌ನಲ್ಲಿ ಕಂಡಕ್ಟರ್ ಹಣದ ಬ್ಯಾಗ್ ಕದ್ದು ಸಿಕ್ಕಿಬಿದ್ದ ಮಹಿಳೆಯ ಹೈಡ್ರಾಮಾ