Home ನಮ್ಮ ಜಿಲ್ಲೆ ಬೆಂಗಳೂರು ಮಾಹೆ ಬೆಂಗಳೂರಿನಲ್ಲಿ ‘ಅಲೆ ಸಾಹಿತ್ಯ ಉತ್ಸವ 2025’ ಸೆ. 18ರಿಂದ

ಮಾಹೆ ಬೆಂಗಳೂರಿನಲ್ಲಿ ‘ಅಲೆ ಸಾಹಿತ್ಯ ಉತ್ಸವ 2025’ ಸೆ. 18ರಿಂದ

0

ಬೆಂಗಳೂರು: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಬೆಂಗಳೂರು ಕ್ಯಾಂಪಸ್‌ನಲ್ಲಿನ ಲಿಬರಲ್ ಆರ್ಟ್ಸ್, ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸ್ ವಿಭಾಗವು (ಡಿಎಲ್‌ಎಚ್‌ಎಸ್) ಮಾಹೆ ಬೆಂಗಳೂರು ಕ್ಯಾಂಪಸ್‌ನಲ್ಲಿ ಇದೇ ಸೆಪ್ಟೆಂಬರ್ 18 ಮತ್ತು 19 ರಂದು ‘ಅಲೆ ಸಾಹಿತ್ಯ ಉತ್ಸವ 2025’ ಹಮ್ಮಿಕೊಂಡಿದೆ.

ಎರಡು ದಿನಗಳ ಈ ಸಾಹಿತ್ಯ ಉತ್ಸವವು ಲೇಖಕರು, ಅನುವಾದಕರು, ಪ್ರಕಾಶಕರು ಮತ್ತು ಸಾಹಿತ್ಯ ಉತ್ಸಾಹಿಗಳನ್ನು ಒಟ್ಟುಗೂಡಿಸಿ ಸೃಜನಶೀಲ ಅಭಿವ್ಯಕ್ತಿಗಾಗಿ ಸಮಗ್ರ ವೇದಿಕೆಯನ್ನು ಸೃಷ್ಟಿಸುತ್ತಿದೆ. ಈ ವರ್ಷ ‘ವೇವ್ಸ್ ಆಫ್ ಸಾಲಿಡಾರಿಟಿ’ ಎನ್ನುವ ಥೀಮ್ ಹೊಂದಲಾಗಿದೆ.

ಅಂತರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರು ಈ ಉತ್ಸವವನ್ನುಉದ್ಘಾಟಿಸಲಿದ್ದಾರೆ. ಮಲಯಾಳಂ ಕವಿ ಎಸ್. ಜೋಸೆಫ್ ಅವರು ಕಾವ್ಯ ಬರವಣಿಗೆಯ ಕುರಿತು ಮತ್ತು ವಿ. ಗೀತಾ ಅವರು ಸಮಕಾಲೀನ ಕಾಲದಲ್ಲಿ ಬಾಬಾಸಾಹೇಬರು ವಿಚಾರಗಳ ಬಗ್ಗೆ ಮಾತನಾಡಲಿದ್ದಾರೆ.

ಉತ್ಸವದಲ್ಲಿ ಪ್ರಸಿದ್ಧ ಲೇಖಕ ಪೆರುಮಾಳ್ ಮುರುಗನ್ ಅವರ ‘ಸ್ಟೂಡೆಂಟ್ಸ್ ಎಚೆಡ್ ಇನ್ ಮೆಮರಿ’ ಕೃತಿಯ ಕುರಿತು ಐಎಎಸ್ ಅಧಿಕಾರಿ ಉಮಾ ಮಹಾದೇವನ್ ದಾಸ್‌ಗುಪ್ತಾ ಅವರೊಂದಿಗೆ ಚರ್ಚೆ ಇರಲಿದೆ. ಗ್ರಾಮೀಣ ವಿದ್ಯಾರ್ಥಿಗಳ ಜೀವನದ ಬಗ್ಗೆ ಆಳವಾದ ಒಳನೋಟಗಳು ಮತ್ತು ಅಂಚಿನಲ್ಲಿರುವ ಜೀವನಗಳ ಮೇಲೆ ಬೆಳಕು ಚೆಲ್ಲುವ ಸಾಹಿತ್ಯದ ಅಗತ್ಯದ ಕುರಿತ ಕೃತಿ ಅದಾಗಿದೆ. ಇದರ ಜೊತೆಗೆ ವಿಷಯ ತಜ್ಞರುಗಳಾದ ಅರ್ಪಿತಾ ದಾಸ್, ಮೇನಕಾ ರಾಮನ್, ಶರಣ್ಯ ಮಣಿವಣ್ಣನ್, ಶ್ರೀನಾಥ್ ಪೆರೂರ್ ಮತ್ತು ರಾಹುಲ್ ಸೋನಿ, ಅತುಲ್ ಟಿ, ರಾಜಸೇಕರ್ ಮತ್ತು ಲಲಿತಾ ಮುರುಗೇಶನ್ ಅವರ ವಿವಿಧ ಘೋಷ್ಠಿ ಇರಲಿದೆ.

ಕಾಬಿಲಾ ಕಲೆಕ್ಟಿವ್‌ನ ‘ವಿ ಪುಶ್ ದಿ ಸ್ಕೈ’ ನಾಟಕ ಮತ್ತು ರಾಧಾ ರಾಮಸ್ವಾಮಿ ಅವರ ರಂಗಭೂಮಿಗೆ ಸಂಬಂಧಿಸಿದ ಸಂವಾದ ಕಾರ್ಯಕ್ರಮ ಸೇರಿದಂತೆ ವಿವಿಧ ಆಕರ್ಷಕ ಪ್ರದರ್ಶನಗಳು ಇರಲಿವೆ. ಈ ಸಾಹಿತ್ಯ ಉತ್ಸವದಲ್ಲಿ ಶಾಲಾ ಮಕ್ಕಳಿಗಾಗಿ ವಿಶೇಷ ಬರವಣಿಗೆ ಕಾರ್ಯಾಗಾರವಿದೆ. ಜೊತೆಗೆ ರಸಪ್ರಶ್ನೆ, ಸ್ಟ್ಯಾಂಡ್-ಅಪ್ ಕಾಮಿಡಿ, ಕಾಸ್ಪ್ಲೇ, ಸ್ಲ್ಯಾಮ್ ಪೊಯೆಟ್ರಿ ಮತ್ತು ಪುಸ್ತಕ ಕವರ್ ಡಿಸೈನಿಂಗ್ ಸೇರಿದಂತೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಈ ಸಾಹಿತ್ಯ ಉತ್ಸವವು ಸಾಂಪ್ರದಾಯಿಕ, ಶೈಕ್ಷಣಿಕ ಗಡಿಗಳನ್ನು ಮೀರಿ ಸಾಹಿತ್ಯ, ಸಂಸ್ಕೃತಿ ಮತ್ತು ಅಂತರ್-ಸಾಂಸ್ಕೃತಿಕ ಜ್ಞಾನವನ್ನು ಬೆಳೆಸುವ ಕುರಿತು ಮಾಹೆ ಬೆಂಗಳೂರಿನ ಬದ್ಧತೆಯನ್ನು ಬಲಪಡಿಸುತ್ತದೆ. ಲೇಖಕರು, ಉದಯೋನ್ಮುಖ ಧ್ವನಿಗಳು, ಪ್ರಕಾಶಕರು, ಅನುವಾದಕರು ಮತ್ತು ಸಾಹಿತ್ಯ ಆಸಕ್ತರನ್ನು ಒಟ್ಟುಗೂಡಿಸುವ ಮೂಲಕ, ಉತ್ಸವವು ಸಮಕಾಲೀನ ಸಮಾಜದಲ್ಲಿ ಒಗ್ಗಟ್ಟನ್ನು ನಿರ್ಮಿಸುವಲ್ಲಿ ಮತ್ತು ವೈವಿಧ್ಯತೆಯನ್ನು ಆಚರಿಸುವಲ್ಲಿ ಸಾಹಿತ್ಯದ ಪಾತ್ರದ ಬಗ್ಗೆ ಅರ್ಥಪೂರ್ಣ ಸಂವಾದಕ್ಕೆ ಅವಕಾಶವನ್ನು ಸೃಷ್ಟಿಸಲಿದೆ.

ನೋಂದಣಿ ಮತ್ತು ವಿವರಗಳು: ನೋಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: bit.ly/aley2025

NO COMMENTS

LEAVE A REPLY

Please enter your comment!
Please enter your name here

Exit mobile version