Home ನಮ್ಮ ಜಿಲ್ಲೆ ಬೆಂಗಳೂರು ತೆರಿಗೆ ಹಣದಲ್ಲಿ 250 ಕೋಟಿ ಕನ್ನ: ಲೋಕಾಯುಕ್ತ ದಾಳಿಯಲ್ಲಿ ಬಯಲಾಯ್ತು ನಕಲಿ ಬಿಲ್ ಜಾಲ!

ತೆರಿಗೆ ಹಣದಲ್ಲಿ 250 ಕೋಟಿ ಕನ್ನ: ಲೋಕಾಯುಕ್ತ ದಾಳಿಯಲ್ಲಿ ಬಯಲಾಯ್ತು ನಕಲಿ ಬಿಲ್ ಜಾಲ!

0

ಬೆಂಗಳೂರಿನ ಲೋಕಾಯುಕ್ತ ಪೊಲೀಸರು ಮಂಗಳವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBR) ಮತ್ತು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಲಿಮಿಟೆಡ್ ಪ್ರಧಾನ ಕಚೇರಿ (KRIDL)ಗಳು ಸೇರಿದಂತೆ 13 ಸ್ಥಳಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿಯನ್ನ ಹುಡುಕಿಸಲಾಗಿದೆ. ನಂತರ ಮೂಲಸೌಕರ್ಯ ಯೋಜನೆಗಳಿಗೆ 250 ಕೋಟಿ ರೂಪಾಯಿ ಮೌಲ್ಯದ ನಕಲಿ ಬಿಲ್‌ಗಳನ್ನು ಒಳಗೊಂಡಿರುವ ಹಗರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪತ್ತೆಹಚ್ಚಿದ್ದಾರೆ.

ಈ ಹಿಂದೇ 2019 ಮತ್ತು 2021 ರಲ್ಲಿ ಮೌಲ್ಯದ ಮೂಲಸೌಕರ್ಯ ಯೋಜನೆಗಳಿಗೆ ಸುಳ್ಳು ಬಿಲ್‌ಗಳನ್ನು ಸಲ್ಲಿಸಲು ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ ಈ ದಾಖಲೆಗಳು ವರ್ಷಗಳ ಹಿಂದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BPMP)ಯ ಹಿಂದಿನ ಪಶ್ಚಿಮ ವಲಯ ಕಚೇರಿಯಲ್ಲಿ ನಾಶವಾಗಿವೆ ಎಂದು ಹೇಳಲಾಗಿತ್ತು. ಈಗ ಅದು ಜಿಬಿಎ ಆಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಕೆಆರ್‌ಐಡಿಎಲ್ ಮತ್ತು ಜಿಬಿಎ ಪ್ರಧಾನ ಕಚೇರಿಗಳಿಂದ ವಶಪಡಿಸಿಕೊಂಡ ಕೆಲವು ಆಧಾರಗಳು ಲೋಕಾಯುಕ್ತ ಪೊಲೀಸರಿಗೆ ಪ್ರಕರಣದ ತನಿಖೆಗೆ ಹೊಸ ಸುಳಿವುಗಳನ್ನು ಒದಗಿಸಿವೆ.

ಲೋಕಾಯುಕ್ತ ಪೊಲೀಸ್ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ರಾಜರಾಜೇಶ್ವರಿ ನಗರ ವಲಯದ ಆರು ವಾರ್ಡ್‌ಗಳಲ್ಲಿ 2019-20 ಮತ್ತು 2020-21ರಲ್ಲಿ 250 ಕೋಟಿ ರೂ. ಮೂಲಸೌಕರ್ಯ ಯೋಜನೆಗಳಿಗೆ ಕೆಲವು ಹೂಸ ಯೋಜನೆಗಳನ್ನು ಸಿದ್ಧಪಡಿಸಲಾಗಿತ್ತು. ರಸ್ತೆ, ಪಾದಚಾರಿ ಮಾರ್ಗ ಮತ್ತು ಒಳಚರಂಡಿ ಕಾಮಗಾರಿಗಳಿಗೆ ನಕಲಿ ಬಿಲ್‌ಗಳನ್ನು ಸಲ್ಲಿಸಿದ್ದರು. ಆದರೆ ಅವುಗಳನ್ನು ಕಾರ್ಯಗತಗೊಳಿಸಲಾಗಿಲ್ಲ ಎಂದು ಆರೋಪಿಸಿಲಾಗಿದೆ.

“ನಂತರ ಅಧಿಕಾರಿಗಳು ತಮ್ಮ ಆಸಕ್ತಿಯ ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಅವರಿಗೆ ಒಪ್ಪಂದವನ್ನು ಪಡೆದರು. ಆದಾಗ್ಯೂ, ಯಾವುದೇ ಕೆಲಸಗಳನ್ನು ಕೈಗೊಳ್ಳಲಾಗಿಲ್ಲ, ಆದರೆ ಪಾವತಿಯನ್ನು ಪಡೆಯಲು ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ” ಎಂದು ಅಧಿಕಾರಿ ಹೇಳಿದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಕೆಲವು ಯೋಜನೆಗಳಿಗೆ ಲಂಚ ಪಡೆದಿರಬಹುದು ಎನ್ನುವ ಸಂದೇಶ ಮೂಡಿದೆ. ತನಿಖೆಯ ಸಮಯದಲ್ಲಿ ರಾಜರಾಜೇಶ್ವರಿ ನಗರ ವಲಯದ ಅಧಿಕಾರಿಗಳು 250 ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಸಂಬಂಧಿಸಿದ ಫೈಲ್‌ಗಳನ್ನು ನಾಶಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಾದ ಬಳಿಕ ಯೋಜನೆಗಳಿಗೆ ಅನುಮೋದನೆ ಪಡೆಯಲು ಈ ಫೈಲ್‌ಗಳನ್ನು ಕೆಆರ್‌ಐಡಿಎಲ್ ಮತ್ತು ಜಿಬಿಎ ಜೊತೆ ಹಂಚಿಕೊಳ್ಳಲಾಗಿದೆ. ಮಾಜಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರು ನೀಡಿದ ದೂರಿನ ಮೇರೆಗೆ ಕೆಲವು ನಿವೃತ್ತ ಅಧಿಕಾರಿಗಳು ಸೇರಿದಂತೆ ಒಂಬತ್ತು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಈ ವರ್ಷದ ಮೇ ತಿಂಗಳಲ್ಲಿ ಬೆಂಗಳೂರಿನ ಮುಖ್ಯ ನಾಗರಿಕ ಸಂಸ್ಥೆಯಾಗಿ ಬಿಬಿಎಂಪಿಯನ್ನು ಜಿಬಿಎ ಬದಲಾಯಿಸಿತು. ಭ್ರಷ್ಟಾಚಾರದ ಆರೋಪವು ಹಿಂದಿನ ಬಿಬಿಎಂಪಿ ಆಡಳಿತದ ಪರಿವರ್ತನೆ ಹಂತದಲ್ಲಿ ಪೂರ್ಣಗೊಂಡ ಕೆಲಸಗಳಿಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version