Home ನಮ್ಮ ಜಿಲ್ಲೆ ಬೆಂಗಳೂರು Bengaluru Suburban Rail: ಭೂ ಸ್ವಾಧೀನ ಕುರಿತು ಮಹತ್ವದ ಅಪ್‌ಡೇಟ್

Bengaluru Suburban Rail: ಭೂ ಸ್ವಾಧೀನ ಕುರಿತು ಮಹತ್ವದ ಅಪ್‌ಡೇಟ್

0

Bengaluru Suburban Rail. ಉದ್ಯಾನ ನಗರಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಕರ್ನಾಟಕ ಸರ್ಕಾರ ಬೆಂಗಳೂರು ಉಪನಗರ ರೈಲು ಯೋಜನೆ (ಬಿಎಸ್‌ಆರ್‌ಪಿ) ಜಾರಿಗೊಳಿಸುತ್ತಿದೆ. ಆದರೆ ಭೂ ಸ್ವಾಧೀನದ ವಿಚಾರಕ್ಕೆ ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗುತ್ತಿಲ್ಲ.

ಕರ್ನಾಟಕ ಸರ್ಕಾರ ಈ ಯೋಜನೆ ಅನುಷ್ಠಾನಕ್ಕಾಗಿ ಕರ್ನಾಟಕ ರೈಲು ಮೂಲಸೌಲಭ್ಯ ಅಭಿವೃದ್ಧಿ ಕಂಪನಿ ನಿಯಮಿತ (ಕೆ-ರೈಡ್) ಸ್ಥಾಪನೆ ಮಾಡಿದೆ. ಈಗ ರೈಲು ಯೋಜನೆಯ ಭೂ ಸ್ವಾಧೀನ ಕುರಿತು ಅಪ್‌ಡೇಟ್ ಒಂದಿದೆ.

ಹೊಸ ಅಪ್‌ಡೇಟ್‌ ಏನು?: ದಿನಾಂಕ 20.09.2025ರಂದು ಬೆಂಗಳೂರು ಉಪನಗರ ರೈಲು ಯೋಜನೆ ಕಾರಿಡಾರ್ -2ರ ನಿರ್ಮಾಣಕ್ಕಾಗಿ ಯಲಹಂಕ ತಾಲ್ಲೂಕು, ಪೀಣ್ಯ ಪ್ಲಾಂಟೇಶನ್ ಗ್ರಾಮದ ಸ.ನಂ 2ಕ್ಕೆ ಹೊಂದಿಕೊಂಡಂತೆ ಇರುವ ಸರಹದ್ದಿನ ರೈಲ್ವೆ ರಸ್ತೆ ಜಮೀನಿನ ಒತ್ತುವರಿ ತೆರವುಗೊಳಿಸಿರುವ ಕುರಿತು ಅಪ್‌ಡೇಟ್ ನೀಡಲಾಗಿದೆ.

ಬೆಂಗಳೂರು ಉಪನಗರ ಯೋಜನೆ ಕಾರಿಡಾರ್ -2ಕ್ಕೆ ಸಂಬಂಧಿಸಿದಂತೆ ಅಲೈನ್‌ಮೆಂಟ್‌ಗೆ ಅವಶ್ಯಕತೆಯಿರುವ ಬೆಂಗಳೂರು ಉತ್ತರ ತಾಲ್ಲೂಕು ಮ್ಯಾಕಲ ಚನ್ನೇನಹಳ್ಳಿ, ಗ್ರಾಮ ಹಾಗೂ ಯಲಹಂಕ ತಾಲ್ಲೂಕು, ಪೀಣ್ಯ ಪ್ಲಾಂಟೇಶನ್ ಗ್ರಾಮದ ಗಡಿ ಮಧ್ಯದಲ್ಲಿ 00-20 ಗುಂಟೆ ಜಮೀನಿನ ಸರಹದ್ದಿನಲ್ಲಿ ರೈಲ್ವೆ ರಸ್ತೆಗೆ ಸೇರಿದ ಸುಮಾರು 500 ಮೀಟರ್ ಖರಾಬು ಜಮೀನು ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇದರ ಮೌಲ್ಯವು ಅಂದಾಜು 40 ಕೋಟಿ ಬೆಲೆಬಾಳುವಂತಾದ್ದಾಗಿರುತ್ತದೆ ಎಂದು ಹೇಳಿದೆ.

ಈ ಸದರಿ ಖರಾಬು ಜಮೀನಿಗೆ ಹೊಂದಿಕೊಂಡಿರುವ ಜಾಗವನ್ನು ಮೆ|| ಬಾಗಮನೆ ಡೆವಲಪರ್ಸ್‌ರವರು ಒತ್ತುವರಿ ಮಾಡಿದ್ದು, ಸ್ಥಳ ಪರಿಶೀಲನೆ ಸಮಯದಲ್ಲಿ ಸದರಿ ಜಾಗವು ರೈಲ್ವೆ ಸರಹದ್ದಿನ ರಸ್ತೆಗೆ ಸೇರಿದ ಜಮೀನಾಗಿರುವುದುದೆಂದು ಭೂದಾಖಲೆಗಳ ಸಹಾಯಕ ನಿರ್ದೇಶಕರು ಬೆಂಗಳೂರು ಉತ್ತರ ತಾಲ್ಲೂಕು ಹಾಗೂ ಯಲಹಂಕ ತಾಲ್ಲೂಕು ರವರು ದೃಢೀಕರಿಸಿರುತ್ತಾರೆ.

ಈ ಸಮಯದಲ್ಲಿ ಮೆ|| ಬಾಗಮನೆ ಡೆವಲಪರ್ಸ್‌ರವರ ಪ್ರತಿನಿಧಿಗಳು ಸಹ ಹಾಜರಿದ್ದು ಅವರಿಗೆ ಒತ್ತುವರಿ ಬಗ್ಗೆ ತಿಳುವಳಿಕೆ ನೀಡಿ, ಒತ್ತುವರಿಯನ್ನು ತೆರವುಗೊಳಿಸಿ, ಬೌಂಡರಿ ಕಲ್ಲುಗಳನ್ನು ಕೆ- ರೈಡ್ ಮತ್ತು ರೈಲ್ವೆ ಇಲಾಖೆಯಿಂದ ಅಳವಡಿಸಿ, ಜಮೀನನ್ನು ಕೆ-ರೆಡ್ ಸಂಸ್ಥೆಗೆ ಕಾಮಗಾರಿ ಕೈಗೊಳ್ಳಲು ಹಸ್ತಾಂತರ ಪಡೆಯಲಾಯಿತು.

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿಗಳ ಮುಖಾಂತರ ದಿನಾಂಕ 20/09/2025 ರಂದು ಒತ್ತುವರಿ ತೆರವುಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಸಮಯದಲ್ಲಿ ವಿಶೇಷ ಜಿಲ್ಲಾಧಿಕಾರಿ ಕೆ-ರೈಡ್, ತಹಶೀಲ್ದಾರ್ ಕೆ-ರೈಡ್, ತಹಶೀಲ್ದಾರ್, ಯಲಹಂಕ ತಾಲ್ಲೂಕು ಮತ್ತು ಬೆಂಗಳೂರು ಉತ್ತರ ತಾಲ್ಲೂಕು, ಭೂ ದಾಖಲೆಗಳ ಸಹಾಯಕ ನಿರ್ದೇಶಕರು, ಬೆಂಗಳೂರು ಉತ್ತರ ತಾಲ್ಲೂಕು ಹಾಗೂ ಯಲಹಂಕ ತಾಲ್ಲೂಕು, ಪ್ರಧಾನ ವ್ಯವಸ್ಥಾಪಕರು, ಕಾರಿಡಾರ್ -2 ಕೆ-ರೈಡ್, ರೈಲ್ವೆ ಇಲಾಖೆಯ ಸಿಬ್ಬಂದಿ ಹಾಗೂ ಜಾಲಹಳ್ಳಿ ಪೊಲೀಸ್ ಸಿಬ್ಬಂದಿ ಹಾಜರಿದ್ದರು. ಇವರುಗಳ ಸಹಯೋಗದೊಂದಿಗೆ ತೆರವು ಕಾರ್ಯವನ್ನು ಪೂರ್ಣಗೊಳಿಸಲಾಯಿತು ಎಂದು ತಿಳಿಸಿದೆ.

ಸಬ್ ಅರ್ಬನ್ ರೈಲು ಯೋಜನೆಯಲ್ಲಿ 4 ಕಾರಿಡಾರ್ ಇದೆ. ಕಾರಿಡಾರ್-2 ‘ಮಲ್ಲಿಗೆ’ ಎಂದು ನಾಮಕರಣ ಮಾಡಿದ್ದು, ಇದು ಬೈಯಪ್ಪನಹಳ್ಳಿ-ಚಿಕ್ಕಬಣಾವರ ನಡುವೆ ಸಂಪರ್ಕವನ್ನು ಕಲ್ಪಿಸುತ್ತಿದೆ. 25 ಕಿ.ಮೀ. ಉದ್ದದ ಈ ಮಾರ್ಗದಲ್ಲಿ 12 ನಿಲ್ದಾಣಗಳು ಬರುತ್ತವೆ.

NO COMMENTS

LEAVE A REPLY

Please enter your comment!
Please enter your name here

Exit mobile version