Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು: 6 ಹೊಸ ಲೇಔಟ್ ನಿರ್ಮಾಣಕ್ಕೆ ಬಿಡಿಎ ಪ್ಲಾನ್

ಬೆಂಗಳೂರು: 6 ಹೊಸ ಲೇಔಟ್ ನಿರ್ಮಾಣಕ್ಕೆ ಬಿಡಿಎ ಪ್ಲಾನ್

0

ಬೆಂಗಳೂರು ನಗರದಲ್ಲಿ ಬಿಡಿಎ ಸೈಟು ಖರೀದಿ ಮಾಡಲು ಆಲೋಚನೆ ನಡೆಸುತ್ತಿರುವ ಜನರಿಗೆ ಸಿಹಿಸುದ್ದಿ ಇದೆ. ಬಿಡಿಎ ಹೊಸ ಲೇಔಟ್ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಸುಮಾರು 50,000ಕ್ಕೂ ಅಧಿಕ ನಿವೇಶನ ನಿರ್ಮಾಣದ ಗುರಿ ಇದೆ. 16,217 ಎಕರೆಯಲ್ಲಿ ಈ ಯೋಜನೆ ಜಾರಿಯಾಗಲಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ವ್ಯಾಪ್ತಿಯಲ್ಲಿ 6 ನೂತನ ಲೇಔಟ್ ನಿರ್ಮಾಣ ಮಾಡಲು ಮುಂದಾಗಿದೆ. ಇದಕ್ಕಾಗಿ ಸುಮಾರು 6,217 ಎಕರೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸರ್ಕಾರ ಅನುಮೋದನೆ ನೀಡಿದೆ.

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆಯವರೆಗೆ ಹೊಂದಿಕೊಂಡಂತೆ 6 ಬಡಾವಣೆಗಳನ್ನು ಒಟ್ಟು 6,217 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲು ಯೋಜಿಸಿದೆ. ಬಡಾವಣೆಗಳ ನಿರ್ಮಾಣಕ್ಕೆ ಭೂಮಿ ಬಿಟ್ಟುಕೊಡುವ ಭೂ ಮಾಲೀಕರಿಗೆ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಬಿಡಿಎ ನಿವೇಶನ ಅಥವ ನಗದು ರೂಪದಲ್ಲಿ ಪರಿಹಾರ ನೀಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

50 ಸಾವಿರ ನಿವೇಶನ ಗುರಿ: ಆರು ಹೊಸ ಬಡಾವಣೆಗಳಿಗಾಗಿ 22 ಗ್ರಾಮಗಳ ವ್ಯಾಪ್ತಿಯ ಸರ್ವೆ ನಂಬರ್‌ಗಳನ್ನು ಗುರುತಿಸಲಾಗಿದೆ. ಇಲ್ಲಿ 50 ಸಾವಿರಕ್ಕೂ ಅಧಿಕ ನಿವೇಶನಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಬಡಾವಣೆಗಳ ನಡುವೆಯೇ 100 ಮೀಟರ್ ಅಗಲದ ಪಿಆರ್‌ಆರ್-2 ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಸಂಪರ್ಕ ರಸ್ತೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಹೆಚ್ಚು ಪ್ರಾಮುಖ್ಯತೆ ಸಿಗಲಿದೆ.

ಎಲ್ಲೆಲ್ಲಿ ಲೇಔಟ್ ನಿರ್ಮಾಣ: ಮಾರಗೊಂಡನಹಳ್ಳಿಯಲ್ಲಿ 84 ಎಕರೆ, ಹುಲಿಮಂಗಲ, ಬೆಟ್ಟದಾಸನಪುರ, ಎಸ್.ಬಿಂಗೀಪುರದಲ್ಲಿ 516 ಎಕರೆ, ಹುಲ್ಲಹಳ್ಳಿಯಲ್ಲಿ 216 ಎಕರೆ, ಬೇಗೂರು, ಹೊಮ್ಮದೇವನಹಳ್ಳಿ, ಕಮ್ಮನಹಳ್ಳಿ, ಆಗ ಮೈಲಸಂದ್ರ, ಎಲ್ಲೇನಹಳ್ಳಿ, ಹುಲ್ಲಳ್ಳಿಯಲ್ಲಿ 510 ಎಕರೆ, ಬಿ.ಎಂ ಕಾವಲ್, ಕಗ್ಗಲೀಪುರ, ಯು.ಎಂ ಕಾವಲ್, ಅಗರ, ಗುಳಕಮಲೈ, ಒ.ಬಿ ಚೂಡನಹಳ್ಳಿ, ಉತ್ತರಿಯಲ್ಲಿ 4,206 ಎಕರೆ, ಬಿ.ಎಂ ಕಾವಲ್, ದೇವಗೆರೆ, ಗಂಗಸಂದ್ರ, ಗುಡಿಮಾವುನಲ್ಲಿ 652 ಎಕರೆ ಭೂಮಿಯಲ್ಲಿ ಈ ನೂತನ ಲೇಔಟ್‌ಗಳ ನಿರ್ಮಾಣವಾಗಲಿದೆ.

ಬಿಡಿಎ ಈಗಾಗಲೇ ಕೆಂಪೇಗೌಡ ಲೇಔಟ್, ಶಿವರಾಮಕಾರಂತ ಲೇಔಟ್ ನಿರ್ಮಿಸುತ್ತಿದೆ. ಜೊತೆಗೆ ತುಮಕೂರು ರಸ್ತೆಯಿಂದ ಬ್ಯುಸಿನೆಸ್ ಕಾರಿಡಾರ್ ಅಕ್ಕಪಕ್ಕದಲ್ಲೂ ಹೊಸ ಲೇಔಟ್‌ಗಳನ್ನು ನಿರ್ಮಾಣ ಮಾಡುವ ಪ್ಲಾನ್ ಹಾಕಿಕೊಂಡಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version