Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು ಭ್ರಷ್ಟಾಚಾರದ ಕ್ಯಾಪಿಟಲ್ ಆಗ್ತಿದೆ : ಕೃಷ್ಣಬೈರೇಗೌಡ…

ಬೆಂಗಳೂರು ಭ್ರಷ್ಟಾಚಾರದ ಕ್ಯಾಪಿಟಲ್ ಆಗ್ತಿದೆ : ಕೃಷ್ಣಬೈರೇಗೌಡ…

0

ಬೆಂಗಳೂರು : ಕಳೆದ 3೦ ವರ್ಷಗಳಿಂದ ಬೆಂಗಳೂರು ಡೆವಲಪ್ ಆಗಿತ್ತು, ಲಕ್ಷಾಂತರ ಯುವಜನರಿಗೆ ಉದ್ಯೋಗ ನೀಡಿತ್ತು. ಇದಕ್ಕೆ ಉತ್ತಮ ಲೀಡರ್ ಶಿಪ್ ಕಾರಣವಾಗಿತ್ತು. ಆದ್ರೆ ಇವತ್ತು ಬೆಂಗಳೂರು ಮುಳುಗುತ್ತಿದೆ. ಇವತ್ತು ಡ್ರಗ್ಸ್ ಸಿಟಿ , ಭ್ರಷ್ಟಾಚಾರದ ಕ್ಯಾಪಿಟಲ್ ಆಗುತ್ತಿದೆ ಎಂದು ಶಾಸಕ ಕೃಷ್ಣಬೈರೇಗೌಡ ಹೇಳಿದ್ಧಾರೆ.

ಬೆಂಗಳೂರಿನಲ್ಲಿ ಕೃಷ್ಣಬೈರೇಗೌಡ ಮಾತನಾಡಿ ಇಲ್ಲಿನ ಉದ್ಯಮಿಗಳನ್ನ ಅವರತ್ತ ಸೆಳೆಯುತ್ತಿದ್ದಾರೆ, ಇದಕ್ಕೆ ಕಾರಣ ಇಂದಿನ ಸರ್ಕಾರದ ದುಸ್ಥಿತಿಯಾಗಿದೆ. ಹೊರಗಿನವರು ಮೊದಲು ಬೆಂಗಳೂರಿಗೆ ಬರ್ತಿದ್ರು, ದೆಹಲಿ,ಮುಂಬೈಗಿಂತ ಮೊದಲು ಬರ್ತಿದ್ರು. ಆದ್ರೆ ಇವತ್ತು ಬೆಂಗಳೂರು ಏನಾಗುತ್ತಿದೆ, ಇವತ್ತು ಡ್ರಗ್ಸ್ ಸಿಟಿ, ಭ್ರಷ್ಟಾಚಾರದ ಕ್ಯಾಪಿಟಲ್ ಆಗುತ್ತಿದೆ. ಮೋಹನ್ ದಾಸ್ ಪೈ ಬಿಜೆಪಿಗೆ ಹತ್ತಿರದವರು, ಕಿರಣ್ ಮಂಜುಂದಾರ್ ಕೂಡ ದೊಡ್ಡ ಉದ್ಯಮಿಯಾಗಿದ್ಧಾರೆ. ಇಬ್ಬರು ಬೆಂಗಳೂರು ಉಳಿಸಿ ಅಂತ ಕೇಳುತ್ತಿದ್ಧಾರೆ . ಆದ್ರೆ ಇವರ ಮಾತು ಪ್ರಧಾನಿಯವರಿಗೆ ಕೇಳುತ್ತಿಲ್ಲ ಎಂದು ಹೇಳಿದ್ಧಾರೆ.

Exit mobile version