Home ನಮ್ಮ ಜಿಲ್ಲೆ ಬಳ್ಳಾರಿ ದುಬೈನಲ್ಲಿ ಸಿಲುಕಿದ ಪ್ರವಾಸಿಗರು, ರಕ್ಷಣೆಗೆ ಸರಕಾರದ ಭರವಸೆ

ದುಬೈನಲ್ಲಿ ಸಿಲುಕಿದ ಪ್ರವಾಸಿಗರು, ರಕ್ಷಣೆಗೆ ಸರಕಾರದ ಭರವಸೆ

0
ದುಬೈನಲ್ಲಿ ಸಿಲುಕಿದ ಪ್ರವಾಸಿಗರು, ರಕ್ಷಣೆಗೆ ಸರಕಾರದ ಭರವಸೆ

ಬಳ್ಳಾರಿ: ಪ್ರವಾಸ ಮುಗಿಸಿಕೊಂಡು ದುಬೈ ಏರ್ಪೋರ್ಟ್‌ನಲ್ಲಿ ಬಳ್ಳಾರಿ ಗ್ರಾಮಾಂತರ ಹಾಗೂ ಚಿತ್ರದುರ್ಗ ನಗರದ 54 ಜನರು ಸಿಲುಕಿಕೊಂಡಿದ್ದಾರೆ. ಪ್ಯಾಕೇಜ್ ಟೂರ್ ನಡಿ ದುಬೈಗೆ ಹೋಗಿ ಏರ್‌ಸ್ಟ್ರೈಕ್‌ನಿಂದ ಅಲ್ಲಿಯೇ ಉಳಿದಿದ್ದಾರೆ. ಈ ಬಗ್ಗೆ ಬಳ್ಳಾರಿ ಗ್ರಾಮೀಣ ಶಾಸಕ ಸಿಎಂ ಸಿದ್ದರಾಮಯ್ಯ ಗಮನ ಸೆಳೆದು ಅವರ ರಕ್ಷಣೆಗೆ ಕೋರಿದ್ದಾರೆ.

ಫ್ಯಾಮಿಲಿ ಜೊತೆ ಪ್ಯಾಕೇಜ್‌ನಲ್ಲಿ ದುಬೈ ಟ್ರಿಪ್‌ಗೆ ತೆರಳಿದ್ದವರು ಇವರೆಲ್ಲರು. 24 ಜನ‌ ಮಹಿಳೆಯರು ವಯಸ್ಸಾದವರಿದ್ದಾರೆ ಎಂದು ಗೊತ್ತಾಗಿದೆ. ಟೂರ್ ವೀಸಾ ಮೇಲೆ ತೆರಳಿದ್ದ ಇವರು, ಇಂದು ಭಾರತಕ್ಕೆ ವಾಪಸ್ಸು ಅಗಲು ಏರ್ಪೋರ್ಟ್‌ಗೆ ತೆರಳಿದ್ದರು. ಇಸ್ರೇಲ್‌-ಇರಾನ್ ನಡುವೆ ಯುದ್ಧ ಆರಂಭವಾಗಿದ್ದು, ವಿಮಾನ ಪ್ರಯಾಣ ರದ್ದಾಗಿದೆ. ಹೀಗಾಗಿ ಇವರಿಗೆ ಏರ್‌ಪೋರ್ಟ್ ಒಳಗೆ ಅವಕಾಶ ನೀಡಿಲ್ಲ. ಸದ್ಯ ಎಲ್ಲರೂ ಸೇರಿ ದಿನವೊಂದಕ್ಕೆ 2 ಲಕ್ಷ ರೂ. ಬಾಡಿಗೆಗೆ ರೂಂ ಪಡೆದು ಉಳಿದುಕೊಂಡಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಇರಾನ್ ಯುದ್ಧದಿಂದಾಗಿ ವಿಮಾನ ರದ್ದು: ಪ್ರವಾಸಿಗರ ಪರದಾಟ

ತೆಗೆದುಕೊಂಡು ಹೋಗಿದ್ದ ಹಣ ಮುಗಿಯುತ್ತಾ ಬಂದಿದೆ. ಕಷ್ಟವಾಗುತ್ತಿದೆ ಅನ್ನೊ‌ ಮಾಹಿತಿ ನೀಡಿದ್ದಾರೆ. ಈ ಕುರಿತು ಅವರ ಜತೆ ಖುದ್ದು ಮಾತನಾಡಿದ ಶಾಸಕ ನಾಗೇಂದ್ರ, ನಾರಾ ಭರತರೆಡ್ಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡಿ ದುಬೈನಲ್ಲಿ ಬಳ್ಳಾರಿ ಕ್ಷೇತ್ರದ ಜನರು ಸಿಲುಕಿರುವ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಘಟನೆಯ ವಿವರ ಪಡೆದುಕೊಂಡ ಸಿಎಂ ಸಿದ್ದರಾಮಯ್ಯ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡುವುದಾಗಿ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಕಾರ್ಯದರ್ಶಿ ಅಂಜುಂ ಪರ್ವೇಜ್ ಜೊತೆಗೂ ಮಾತನಾಡಿರುವ ಇಲ್ಲಿನ ಶಾಸಕರು ದುಬೈನಲ್ಲಿ ಸಿಲಿಕಿಕೊಂಡಿರುವ ಕ್ಷೇತ್ರದ ಜನರ ಬಗ್ಗೆ ಮಾಹಿತಿ ನೀಡಿದ್ದಾರೆ. ಏರ್‌ಸ್ಟ್ರೈಕ್ ಆರಂಭವಾಗಿದ್ದು, ಎಲ್ಲ ವಿಮಾನಗಳ ನಿಲುಗಡೆಯಾಗಿವೆ. ಮಾರ್ಚ್ 2ರ ವರೆಗೆ ಯಾವುದೇ ವಿಮಾನ‌ ಹಾರಾಟವಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದುಬೈ ಸರ್ಕಾರದ ನಿರ್ದೇಶನದಂತೆ ನಡೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. ದುಬೈನಲ್ಲಿ ಸಿಲುಕಿದ ಇವರ ರಕ್ಷಣೆಗೆ ರಾಜ್ಯ ಸರಕಾರ ಪ್ರಯತ್ನಿಸುತ್ತಿದೆ.