Home ನಮ್ಮ ಜಿಲ್ಲೆ ಬೆಳಗಾವಿ ಬೆಳಗಾವಿ ಜೈಲಿನಲ್ಲೇ ಬಡಿದಾಟ, ಕೈದಿಗೆ ಗಾಯ

ಬೆಳಗಾವಿ ಜೈಲಿನಲ್ಲೇ ಬಡಿದಾಟ, ಕೈದಿಗೆ ಗಾಯ

0

ಬೆಳಗಾವಿಯಲ್ಲಿ ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಯೋರ್ವನ ಮೇಲೆ ಕೆಲ ವಿಚಾರಣಾಧೀನ ಕೈದಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರಾಮತೀರ್ಥನಗರ ನಿವಾಸಿ ನಿತೇಶಕುಮಾರ ಚವ್ಹಾಣ ಎಂಬ ವಿಚಾರಣಾಧೀನ ಕೈದಿ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆಗೊಳಗಾದ ನಿತೇಶಕುಮಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುತ್ತ್ಯಾನಟ್ಟಿಯ ವಿಚಾರಣಾಧೀನ ಕೈದಿಗಳಾದ ಬಸವರಾಜ ಹೊಳೆಪ್ಪ ದಡ್ಡಿ, ಬಸವಣ್ಣಿ ಸಿದ್ದಪ್ಪ ನಾಯಿಕ, ಸವೆನಾ ಸಿದ್ದಪ್ಪ ದಡ್ಡಿ ಹಾಗೂ ಪ್ರಧಾನಿ ಶೇಖರ ವಾಘಮೋಡೆ ಎಂಬಾತರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಸಂಬಂಧಿಕನ ಮೇಲೆ ಹಲ್ಲೆ ಮಾಡಿದ್ದ ಎಂಬ ಕಾರಣಕ್ಕೆ ಎಲ್ಲರೂ ಸೇರಿ ಈತನ ಮೇಲೆ ಹಲ್ಲೆ ನಡೆಸಿದ್ದಾರೆಂದು ಗೊತ್ತಾಗಿದೆ.

Exit mobile version