ಸಂಪ್‌ನಲ್ಲಿ ಬಿದ್ದು ಬಾಲಕಿ ಸಾವು: ಜೀವ ಮರಳಿತರಲು ಉಪ್ಪಿನಲ್ಲಿಟ್ಟ ಕುಟುಂಬಸ್ಥರು..!

ಬಾಗಲಕೋಟೆ: ಮನೆ ಮುಂದೆ ಆಟವಾಡುತ್ತ ನೀರಿನ ಸಂಪ್‌ನಲ್ಲಿ ಬಿದ್ದು ಮೃತಪಟ್ಟ ಬಾಲಕಿ ಮರಳಿ ಜೀವ ಪಡೆಯಬಹುದು ಎಂದು ಕುಟುಂಬಸ್ಥರು ಎರಡು ಗಂಟೆಗಳ ಕಾಲ ಉಪ್ಪಿನಲ್ಲಿರಿಸಿ, ಕುರಾನ್ ಪಠಿಸಿದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ನವನಗರದ 38ನೇ ಸೆಕ್ಟರ್‌ನ ಶಗುಫ್ತಾ ತೌಸಿಫ್ ಪಠಾಣ್ ದಂಪತಿಯ ಮಗಳು ಅಮಿನಾ ಮನೆ ಮುಂದೆ ಆಟವಾಡುತ್ತಿದ್ದಳು. ನೀರು ಬಂದಿದ್ದರಿಂದ ನೆಲಮಟ್ಟದ ಸಂಪ್‌ನ ಮುಚ್ಚಳವನ್ನು ತೆರೆದಿಡಲಾಗಿತ್ತು. ಈ ವೇಳೆ ಎದುರು ಮನೆಯ ಸಂಪ್‌ನಲ್ಲಿ ಬಿದ್ದು ಬಾಲಕಿ ಮೃತಪಟ್ಟಿದ್ದಾಳೆ. ಆಕೆ ನಾಪತ್ತೆಯಾಗಿರುವುದನ್ನು ಗಮನಿಸಿ ವಿಷಯವನ್ನು ಪೊಲೀಸರಿಗೆ … Continue reading ಸಂಪ್‌ನಲ್ಲಿ ಬಿದ್ದು ಬಾಲಕಿ ಸಾವು: ಜೀವ ಮರಳಿತರಲು ಉಪ್ಪಿನಲ್ಲಿಟ್ಟ ಕುಟುಂಬಸ್ಥರು..!