Home ನಮ್ಮ ಜಿಲ್ಲೆ 3 ದಿನಗಳ ಕರ್ನಾಟಕ ಭೇಟಿಯಲ್ಲಿ ಚುನಾವಣಾ ಆಯೋಗ

3 ದಿನಗಳ ಕರ್ನಾಟಕ ಭೇಟಿಯಲ್ಲಿ ಚುನಾವಣಾ ಆಯೋಗ

0

ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯ ಸಿದ್ಧತೆಯನ್ನು ಪರಿಶೀಲಿಸಲು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ನೇತೃತ್ವದ ಚುನಾವಣಾ ಆಯೋಗದ ಅಧಿಕಾರಿಗಳ ತಂಡ ಗುರುವಾರ ನಗರಕ್ಕೆ ಆಗಮಿಸಿದ್ದು.
ಚುನಾವಣಾ ಆಯುಕ್ತರನ್ನೊಳಗೊಂಡ ತಂಡ ಕರ್ನಾಟಕಕ್ಕೆ ಮೂರು ದಿನಗಳ ಭೇಟಿ ನೀಡಿದ್ದು, ಮೇ ವೇಳೆಗೆ ವಿಧಾನಸಭೆ ಚುನಾವಣೆ ನಡೆಯಲಿದೆ.
ಭಾರತ ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾದ ಅನೂಪ್ ಚಂದ್ರಪಾಂಡೆ, ಅರುಣ್ ಗೋಯಲ್ ಹಾಗೂ ಉಪ ಆಯುಕ್ತರು ಸೇರಿದಂತೆ ಆಯೋಗದ ಹಿರಿಯ ಅಧಿಕಾರಿಗಳು ಇದ್ದಾರೆ. ಮುಂಬರುವ ಚುನಾವಣೆಗೆ ಸಿದ್ಧತೆ ನಡೆಸಿರುವ ಕುರಿತು ಚುನಾವಣಾ ಆಯೋಗವು ಮಾರ್ಚ್ 10 ರಂದು ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಲಿದೆ. ನಂತರ, ಮತದಾರರ ಜಾಗೃತಿಗಾಗಿ ಉದ್ದೇಶಿಸಲಾದ ಎಲ್ಇಡಿ ವಾಹನಗಳ ಉದ್ಘಾಟನೆಗೂ ಮುನ್ನ ಚುನಾವಣಾ ಆಯೋಗವು ಚುನಾವಣಾ ಪ್ರದರ್ಶನವನ್ನು ಉದ್ಘಾಟಿಸಲಿದೆ. ಚುನಾವಣಾ ಆಯುಕ್ತರು ಮಾರ್ಚ್ 11 ರಂದು ಶನಿವಾರ ದೆಹಲಿಗೆ ಹಿಂತಿರುಗುವ ಮೊದಲು ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Exit mobile version