Home ನಮ್ಮ ಜಿಲ್ಲೆ 15 ದಿನದೊಳಗೆ ಗೃಹಲಕ್ಷ್ಮೀ ಹಣ

15 ದಿನದೊಳಗೆ ಗೃಹಲಕ್ಷ್ಮೀ ಹಣ

0

ಬೆಂಗಳೂರು: ಅರ್ಹ ಫಲಾನುಭವಿಗಳ ಬ್ಯಾಂಕ್​​ ಖಾತೆಗೆ ಗೃಹಲಕ್ಷ್ಮೀ ಹಣ ಇನ್ನು 15 ದಿನದೊಳಗೆ ಬರಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದರು.
ತಾಂತ್ರಿಕ ಸಮಸ್ಯೆಯಿಂದಾಗಿ ಕೆಲ ಮಹಿಳೆಯರ ಖಾತೆಗೆ ಹಣ ಹೋಗಿಲ್ಲ. ಹೀಗಾಗಿ ಇಂದು ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆದಿದ್ದೇನೆ ಎಂದ ಅವರು, ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ ಇದ್ದರೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದು ಹಣವನ್ನು ನೇರವಾಗಿ ಅಂಚೆ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ ರಾಜ್ಯದ ಮಹಿಳೆಯರು ಅಂಚೆ ಇಲಾಖೆಯಲ್ಲಿ ಖಾತೆ ತೆರೆಯುವಂತೆ ತಿಳಿಸಿದರು. ಅಂಚೆ ಇಲಾಖೆಯಲ್ಲಿ ಖಾತೆ ತೆರೆದರೆ ಅರ್ಹ ಗೃಹಿಣಿಯರ ಖಾತೆಗೆ ಒಟ್ಟಾಗಿ 6,000 ರೂಪಾಯಿ ಜಮಾ ಆಗಲಿದೆ ಎಂದು ಆಶ್ವಾಸನೆ ನೀಡಿದರು.

Exit mobile version