Home ನಮ್ಮ ಜಿಲ್ಲೆ ಹಿರೇಕೋಡಿ ನಂದಿ ಆಶ್ರಮಕ್ಕೆ ಸಿಐಡಿ ಡಿಜಿಪಿ ಭೇಟಿ

ಹಿರೇಕೋಡಿ ನಂದಿ ಆಶ್ರಮಕ್ಕೆ ಸಿಐಡಿ ಡಿಜಿಪಿ ಭೇಟಿ

0


ಚಿಕ್ಕೋಡಿ: ಹಿರೇಕೋಡಿ ನಂದಿ ಪರ್ವತ ಆಶ್ರಮದ ಜೈನಮುನಿ ಕಾಮಕುಮಾರನಂದಿ ಮಹಾರಾಜರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಸಿಐಡಿ ಡಿಜಿಪಿ ನೇತೃತ್ವದ ತಂಡ ಶನಿವಾರ ಆಶ್ರಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.
ಸಿಐಡಿ ಆರ್ಥಿಕ ಅಪರಾಧಗಳು ಮತ್ತು ವಿಶೇಷ ಘಟಕಗಳ ಮುಖ್ಯಸ್ಥ ಡಾ.ಎಂ.ಎ.ಸಲೀA ನೇತೃತ್ವದ ತಮಡ ಚಿಕ್ಕೋಡಿ, ಮಾವಿನಹೊಂಡ ಮತ್ತು ಕಟಕಭಾವಿ ಗ್ರಾಮಗಳಿಗಳಿಗೆ ಭೇಟಿ ನೀಡಿದರು. ಆಶ್ರಮಕ್ಕೆ ಭೇಟಿ ವೇಳೆ ಕೆಲಕಾಲ ಸ್ಥಳೀಯರ ಜೊತೆ ಚರ್ಚಿಸಿ ಅಗತ್ಯ ಮಾಹಿತಿ ಕಲೆಹಾಕಿದರು. ಅಲ್ಲದೆ, ಪ್ರಕರಣದ ತನಿಖೆ ನಡೆಸಿದ ಸಿಪಿಐ ಯಲಿಗಾರ ನೇತೃತ್ವದ ತಂಡದಿAದ ತನಿಖೆಯ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ಐಜಿಪಿ, ಸಿಐಡಿ ಪ್ರವೀಣ್ ಪವಾರ ಐಪಿಎಸ್ ಮತ್ತು ಐಜಿಪಿ ಎನ್. ಆರ್. ವಿಕಾಸ್‌ಕುಮಾರ ಜೊತೆಗೆ ಸಿಐಡಿಯ ಸಂಪೂರ್ಣ ತನಿಖಾ ತಂಡ ಇತ್ತು.

Exit mobile version