Home ನಮ್ಮ ಜಿಲ್ಲೆ ಧಾರವಾಡ ಸಿಸಿಬಿ ಪೊಲೀಸರ ದಾಳಿ: 3 ಕೋಟಿ ಅಕ್ರಮ ಹಣ ಪತ್ತೆ

ಸಿಸಿಬಿ ಪೊಲೀಸರ ದಾಳಿ: 3 ಕೋಟಿ ಅಕ್ರಮ ಹಣ ಪತ್ತೆ

0

ಹುಬ್ಬಳ್ಳಿ : ಇಲ್ಲಿನ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿರುವ ರಮೇಶ ಬೋಣಗೇರಿ ಅವರ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕೋಟಿ ಹಣ ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಡಿವೈಎಸ್ ಪಿ ನಾರಾಯಣ ಭರಮನಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡವು, ರಮೇಶ್ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪತ್ತೆಗೆ ಜಾಲಾಡಿತು. ಈ ವೇಳೆ ಮೂರು ಕೋಟಿ ಹಣ ಪತ್ತೆಯಾಗಿದೆ ಎಂದು ತಿಳಿದಿದೆ. ಶಾಸಕ ಮಾಡಾಳ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ ಲಂಚ ಪಡೆದ ಪ್ರಕರಣಕ್ಕೂ ಇದಕ್ಕೂ ಸಂಬಂಧವಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

Exit mobile version