Home ಅಪರಾಧ ಸಿಲಿಂಡರ್ ಸ್ಫೋಟ: ಅಪಾರ ಹಾನಿ

ಸಿಲಿಂಡರ್ ಸ್ಫೋಟ: ಅಪಾರ ಹಾನಿ

0


ಹುಬ್ಬಳ್ಳಿ: ಹಳೇಹುಬ್ಬಳ್ಳಿಯ ಜಂಗ್ಲಿಪೇಟೆ ಬಸವಣ್ಣ ದೇವಸ್ಥಾನದ ಹಿಂಭಾಗದಲ್ಲಿರುವ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಅಪಾರ ಪ್ರಮಾಣದ ಗೃಹೋಪಯೋಗಿ ವಸ್ತುಗಳು ಹಾನಿಯಾದ ಘಟನೆ ಗುರುವಾರ ರಾತ್ರಿ ನಡೆದಿದೆ.
ಜಂಗ್ಲಿಪೇಟೆಯ ನಿವಾಸಿ ಪರುತಪ್ಪ ಹಿಟ್ನಳ್ಳಿ ಎಂಬುವವರ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಪರುತಪ್ಪ ಅವರಿಗೆ ಕಾಲಿಗೆ ಗಾಯಗಳಾಗಿವೆ.
ಬಾಡಿಗೆ ಮನೆಯಲ್ಲಿ ಪರುತಪ್ಪ ವಾಸಿಸುತ್ತಿದ್ದರು.‌ಅಜ್ಜ ಅಜ್ಜಿ ಇಬ್ಬರೆ ಇದ್ದು, ಗುರುವಾರ ಸಿಲಿಂಡರ್ ಆನ್ ಮಾಡಿದಾಗ ಒಮ್ಮೇಲೆ ಬೆಂಕಿ‌ ಕಾಣಿಸಿಕೊಂಡಿದೆ. ಇದರಿಂದ ಕೆಲಕಾಲ ಸುತ್ತಮುತ್ತಲಿನ ಜನರು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಸ್ಥಳೀಯ ಯುವಕರು ಹಾಗೂ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ‌ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿ ಅನಾಹುತದಿಂದ ಬಟ್ಟೆ, ಪಾತ್ರೆಗಳು, ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version