Home ನಮ್ಮ ಜಿಲ್ಲೆ ಧಾರವಾಡ ವಾಕರಸಾಸಂ: ಮೊದಲ ದಿನ ಶೂನ್ಯ ಟಿಕೆಟ್ ದರದ ಮೊತ್ತ ೩೬.೧೭ ಲಕ್ಷ!

ವಾಕರಸಾಸಂ: ಮೊದಲ ದಿನ ಶೂನ್ಯ ಟಿಕೆಟ್ ದರದ ಮೊತ್ತ ೩೬.೧೭ ಲಕ್ಷ!

0

ಹುಬ್ಬಳ್ಳಿ: ರಾಜ್ಯಾದ್ಯಂತ ಆರಂಭವಾಗಿರುವ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರ ಉಚಿತ ಪ್ರಯಾಣದ “ಶಕ್ತಿ ಯೋಜನೆ”ಯ ಮೊದಲ ದಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಬಸ್ಸುಗಳಲ್ಲಿ ೧.೨೨ ಲಕ್ಷ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ಸ್ತ್ರೀ ಸಬಲೀಕರಣದ ನಿಟ್ಟಿನಲ್ಲಿ ರವಿವಾರ ಜೂನ್ ೧೧ರಂದು ಆರಂಭಿಸಲಾಗಿರುವ ಸರ್ಕಾರಿ ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿರುತ್ತದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಸಂಸ್ಥೆಯ ವ್ಯಾಪ್ತಿಯ ಧಾರವಾಡ ಬೆಳಗಾವಿ ಬಾಗಲಕೋಟೆ ಗದಗ ಹಾವೇರಿ ಮತ್ತು ಉತ್ತರಕನ್ನಡ ಆರು ಜಿಲ್ಲೆಗಳಲ್ಲಿ ಜೂನ್ ೧೧ರಂದು ಮಧ್ಯಾಹ್ನ ೧:೦೦ ಯಿಂದ ರಾತ್ರಿ ೧೨ ಗಂಟೆವರೆಗೆ ಒಟ್ಟು ೧,೨೨,೩೫೪ ಮಹಿಳೆಯರು ಪ್ರಯಾಣಮಾಡಿದ್ದಾರೆ. ಪ್ರಯಾಣ ಮಾಡಿದ ಬಸ್ ಟಿಕೆಟ್ ದರದ ಮೊತ್ತ ರೂ. ೩೬,೧೭,೦೯೬ ಗಳಾಗಿದೆ.
ಮುಂದಿನ ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾವಾರು ಮಾಹಿತಿ:
ಜಿಲ್ಲೆ / ಮಹಿಳಾ ಪ್ರಯಾಣಿಕರು
ಧಾರವಾಡ ನಗರ ಸಾರಿಗೆ ೧೨೩೫೪
ಧಾರವಾಡ ಗ್ರಮಾಂತರ ೧೧,೭೮೦
ಬೆಳಗಾವಿ ೩೪,೭೯೭
ಬಾಗಲಕೋಟೆ ೧೧,೬೮೭
ಗದಗ ೧೩,೬೩೦
ಹಾವೇರಿ ೧೬,೬೫೬
ಉತ್ತರ ಕನ್ನಡ ೮,೪೯೭

Exit mobile version