Home ನಮ್ಮ ಜಿಲ್ಲೆ ಲೋಕಾಯುಕ್ತ ವಿಚಾರಣೆಗೆ ಹಾಜರಾದ ಶಾಸಕ ಮಾಡಾಳ್

ಲೋಕಾಯುಕ್ತ ವಿಚಾರಣೆಗೆ ಹಾಜರಾದ ಶಾಸಕ ಮಾಡಾಳ್

0

ಬೆಂಗಳೂರು: ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಎ 1 ಆರೋಪಿಯಾಗಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಗುರುವಾರ ಲೋಕಾಯಕ್ತ ತನಿಖಾಧಿಕಾರಿ ಮುಂದೆ ಹಾಜರಾದರು. ಬೆಂಗಳೂರು ಲೋಕಾಯಕ್ತ ಕಚೇರಿಗೆ ಆಗಮಿಸಿದ ಅವರು, ತನಿಖಾಧಿಕಾರಿ ಮುಂದೆ ಹಾಜರಾದರು. ಲಂಚ ಸ್ವೀಕಾರ ಪ್ರಕರಣದ ಬಳಿಕ ತಲೆ ಮರೆಸಿಕೊಂಡಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿತ್ತು.
ಜಾಮೀನು ನೀಡುವ ಸಂದರ್ಭದಲ್ಲಿ 48 ತಾಸುಗಳ ಒಳಗಾಗಿ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿತ್ತು. ಅದರಂತೆ ಮಾಡಾಳ್ ಅವರು ಗುರುವಾರ ಸಂಜೆ ಲೋಕಾಯಕ್ತ ಕಚೇರಿಗೆ ಆಗಮಿಸಿ ತನಿಖಾಧಿಕಾರಿ ಮುಂದೆ ಹಾಜರಾದರು‌.

Exit mobile version