Home ನಮ್ಮ ಜಿಲ್ಲೆ ಧಾರವಾಡ ರೆಡ್ಡಿ ನೂತನ ಪಕ್ಷದ ಬಗ್ಗೆ ಮಾಹಿತಿಯಿಲ್ಲ: ಮಾಜಿ ಸಿಎಂ ಜಗದೀಶ ಶೆಟ್ಟರ್‌

ರೆಡ್ಡಿ ನೂತನ ಪಕ್ಷದ ಬಗ್ಗೆ ಮಾಹಿತಿಯಿಲ್ಲ: ಮಾಜಿ ಸಿಎಂ ಜಗದೀಶ ಶೆಟ್ಟರ್‌

0

ಧಾರವಾಡ: ಜಾನರ್ದನ ರೆಡ್ಡಿಯ ನೂತನ ಪಕ್ಷದಿಂದ ಬಿಜೆಪಿ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ ಎಂಬುದನ್ನು ಕಾದು ನೋಡಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರು ನೂತನ ಪಕ್ಷ ರಚನೆ ಮಾಡುವ ಕುರಿತು ನನಗೆ ಮಾಹಿತಿಯಿಲ್ಲ. ಈ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚಿಸುತ್ತೇನೆ. ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇನೆ. ಜನಾರ್ದನ ರೆಡ್ಡಿ ಅವರು ನೂತನ ಪಕ್ಷ ರಚಿವ ಕುರಿತು ನನ್ನೊಂದಿಗೆ ಚರ್ಚಿಸಿಲ್ಲ. ಇತ್ತೀಚೆಗೆ ಅವರೊಂದಿಗೆ ಸಂಪರ್ಕ ಇರಲಿಲ್ಲ. ಈ ಬಗ್ಗೆ ಹೆಚ್ಚಿಗೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ರೆಡ್ಡಿ ಪಕ್ಷ ಬಿಜೆಪಿಯ ʻಬಿʼ ಟೀಮ್ ಎಂಬ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ ಎಂದರು.

ರೆಡ್ಡಿ ನೂತನ ಪಕ್ಷದ ಬಗ್ಗೆ ಮಾಹಿತಿಯಿಲ್ಲ: ಮಾಜಿ ಸಿಎಂ ಜಗದೀಶ ಶೆಟ್ಟರ್‌

Exit mobile version