Home News ರಾಮನಗರದಿಂದ ಪುತ್ರ ನಿಖಿಲ್‌ ಕಣಕ್ಕೆ: ಅನಿತಾ ಕುಮಾರಸ್ವಾಮಿ ಘೋಷಣೆ

ರಾಮನಗರದಿಂದ ಪುತ್ರ ನಿಖಿಲ್‌ ಕಣಕ್ಕೆ: ಅನಿತಾ ಕುಮಾರಸ್ವಾಮಿ ಘೋಷಣೆ

ರಾಮನಗರ: 2023ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪುತ್ರ ನಿಖಿಲ್‌ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಲಿದ್ದಾರೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸಿದ್ದಾರೆ.
ರಾಮನಗರದ ಹಳೇ ಬಸ್‌ ನಿಲ್ದಾಣದಲ್ಲಿ ಪಂಚರತ್ನ ಯಾತ್ರೆ ಉದ್ದೇಶಿಸಿ ಅವರು ಮಾತನಾಡಿದರು. ನಿಖಿಲ್‌ ರಾಮನಗರದಿಂದ ಕಣಕ್ಕಿಳಿಯುತ್ತಾರೆ ಎಂದು ಘೋಷಿಸುತ್ತಿದ್ದಂತೆ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು.
ನಾನು ದೇವರ ಮುಂದೆ ನಿಂತಾಗ ನನ್ನ ಪತಿ ಹಾಗೂ ಪುತ್ರನ ಏಳ್ಗೆಯನ್ನು ಬಯಸುತ್ತೇನೆ. ಕೆಲವರು ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಯಾವುದೇ ಗೊಂದಲಕ್ಕೂ ಎಡೆಮಾಡಿಕೊಡಬೇಡಿ ಎನ್ನುತ್ತಾ ಅನಿತಾ ಕುಮಾರಸ್ವಾಮಿ ಭಾವುಕರಾದರು.

ರಾಮನಗರದಿಂದ ಪುತ್ರ ನಿಖಿಲ್‌ ಕಣಕ್ಕೆ: ಅನಿತಾ ಕುಮಾರಸ್ವಾಮಿ ಘೋಷಣೆ
Exit mobile version