Home ನಮ್ಮ ಜಿಲ್ಲೆ ಧಾರವಾಡ ರಸ್ತೆ ಅಪಘಾತದಲ್ಲಿ‌ ವ್ಯಕ್ತಿ ಸಾವು: ಶವದ ಮೇಲೆ ಹರಿದ ಹಲವು ವಾಹನ

ರಸ್ತೆ ಅಪಘಾತದಲ್ಲಿ‌ ವ್ಯಕ್ತಿ ಸಾವು: ಶವದ ಮೇಲೆ ಹರಿದ ಹಲವು ವಾಹನ

0

ಹುಬ್ಬಳ್ಳಿ: ಹೋಟೆಲ್ ಸಪ್ಲಾಯರ್ ಆಗಿದ್ದ ವ್ಯಕ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ರಸ್ತೆ ನಡುವೆ ಬಿದ್ದ ಶವದ ಮೇಲೆ ಹಲವಾರು ವಾಹನಗಳು ಹತ್ತಸಿಕೊಂಡು ಹೋದ ಘಟನೆ ನಡೆದಿದೆ.
ನಗರದ ಹೊರವಲಯದ ಕುಂದಗೋಳ ಕ್ರಾಸ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ಕಾರು ಡಿಕ್ಕಿ ಹೊಡೆದಿದ್ದರಿಂದ ವಿಜಯಪುರ ಜಿಲ್ಲೆಯ ಅಲಮಟ್ಟಿ ನಿವಾಸಿ ಸಂಗಪ್ಪ ಗಲಗಲಿ(45) ಮೃತಪಟ್ಟಿದ್ದಾರೆ.
ಅಪರಿಚಿತ ಕಾರು ಡಿಕ್ಕಿ ಹೊಡೆದು, ನಿಲ್ಲಿಸದೆ ಹೋಗಿದೆ. ಕತ್ತಲು ಇದ್ದಿದ್ದರಿಂದ ಹಲವು ವಾಹನಗಳು ಶವದ ಮೇಲೆ ಹತ್ತಿಸಿಕೊಂಡು ಹೋಗಿದ್ದು, ದೇಹದ ಭಾಗಗಳು ರಸ್ತೆಯ ತುಂಬೆಲ್ಲಾ ಹರಡಿಕೊಂಡಿವೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ‌ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version