Home ನಮ್ಮ ಜಿಲ್ಲೆ ರಮೇಶ ಜಾರಕಿಹೊಳಿಗೆ ಸರಕಾರ ಬೀಳಿಸುವ ಶಕ್ತಿ ಇದೆ: ಸತೀಶ್‌

ರಮೇಶ ಜಾರಕಿಹೊಳಿಗೆ ಸರಕಾರ ಬೀಳಿಸುವ ಶಕ್ತಿ ಇದೆ: ಸತೀಶ್‌

0

ಗೋಕಾಕ: ಸರಕಾರ ಬೀಳಿಸುವ ಶಕ್ತಿ ರಮೇಶರಲ್ಲಿ ಮಾತ್ರ ಇದೆ ಅವರು ಮತ್ತೊಮ್ಮೆ ಸರಕಾರ ಬೀಳಿಸುವ ಪ್ರಯತ್ನ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಸಮಾರಂಭವೊಂದರಲ್ಲಿ ಮಾತನಾಡದ ಅವರು, ಜಾರಕಿಹೊಳಿ ಕುಟುಂಬದಲ್ಲಿ ಪ್ರಸ್ತುತ ನಾವು ನಾಲ್ಕು ಸಹೋದರರು ಅಧಿಕಾರದಲ್ಲಿ ಇದ್ದರೂ ಸಹ ನಮ್ಮ ನಡೆ, ನುಡಿಗಳು ಬೇರೆ, ಬೇರೆಯಾಗಿವೆ. ಸರಕಾರ ಬೀಳಿಸುವ ಕಾರ್ಯ ಶಾಸಕ ರಮೇಶ ಜಾರಕಿಹೊಳಿ ಅವರಿಂದ ಮಾತ್ರ ಸಾಧ್ಯ. ನಾನು ರಮೇಶ ಜಾರಕಿಹೊಳಿ ಅವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ ಅವರು ಮತ್ತೊಮ್ಮೆ ಅಂತಹ ಪ್ರಯೋಗ ಮಾಡಲಿ ಎಂದು ಪ್ರಾರ್ಥಿಸುತ್ತೇನೆ ಎಂದ ಸತೀಶ. ಸಹೋದರ ರಮೇಶ ಜಾರಕಿಹೊಳಿ ಅವರಿಗೆ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷಕ್ಕೆ ಆಹ್ವಾನಿಸಿದರು.

Exit mobile version