Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಮೊಬೈಲ್‌ನಲ್ಲಿ ಮಾತನಾಡುವಾಗ ಬಡಿದ ಸಿಡಿಲು: ಯುವಕ ಸಾವು

ಮೊಬೈಲ್‌ನಲ್ಲಿ ಮಾತನಾಡುವಾಗ ಬಡಿದ ಸಿಡಿಲು: ಯುವಕ ಸಾವು

0

ಮಂಗಳೂರು: ಮನೆಯ ಹೊರಗೆ ಮೊಬೈಲ್ ಪೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ ಯುವಕನೊಬ್ಬ ಮೃತಪಟ್ಟ ಘಟನೆ ಉಡುಪಿ ಆವರ್ಸೆ ಸಮೀಪ ಕಿರಾಡಿಯಲ್ಲಿ ನಡೆದಿದೆ.
ಮೃತ ಯುವಕನನ್ನು ಸ್ಥಳೀಯ ಕಿರಾಡಿ ಹಂಚಿನಮನೆ ನಿವಾಸಿ ಪ್ರಮೋದ್ ಶೆಟ್ಟಿ ( ೨೪) ಎಂದು ಗುರುತಿಸಲಾಗಿದೆ. ಈತ ಮನೆಯ ಹೊರೆಗೆ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದು, ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಪ್ರಮೋದ್ ಬಡ ಕುಟುಂಬದವನಾಗಿದ್ದು, ಕ್ರೀಡಾಪಟುವಾಗಿದ್ದರು. ಶಿಕ್ಷಣ ಮುಗಿಸಿ ಬ್ರಹ್ಮಾವರದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು.

Exit mobile version