Home ನಮ್ಮ ಜಿಲ್ಲೆ ಧಾರವಾಡ ಮೈಸೂರಿನಲ್ಲಿ ಟಿಪ್ಪು ಪುತ್ಥಳಿ ನಿರ್ಮಾಣ ಬೇಡ: ಮುತಾಲಿಕ್ ಒತ್ತಾಯ

ಮೈಸೂರಿನಲ್ಲಿ ಟಿಪ್ಪು ಪುತ್ಥಳಿ ನಿರ್ಮಾಣ ಬೇಡ: ಮುತಾಲಿಕ್ ಒತ್ತಾಯ

0

ಹುಬ್ಬಳ್ಳಿ: ಮೈಸೂರಿನಲ್ಲಿ ಟಿಪ್ಪುಸುಲ್ತಾನ್ ಪುತ್ಥಳಿ ನಿರ್ಮಾಣಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ನಿರ್ಮಾಣ ಮಾಡಿದರೆ ನಾವು ಒಡೆದು ಹಾಕುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಗುಡುಗಿದ್ದಾರೆ.
ಹುಬ್ಬಳ್ಳಿಯ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಪಾಲಿಕೆ ಜಾಗದಲ್ಲಿ ಭಕ್ತ ಕನಕದಾಸ ಜಯಂತಿ ಆಚರಣೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟಿಪ್ಪು ಜಯಂತಿ ಆಚರಣೆ ಮಾಡಿದ ಹಿನ್ನೆಲೆಯಲ್ಲಿ ಮೈದಾನ ಅಪವಿತ್ರಗೊಂಡಿದೆ. ಹೀಗಾಗಿ, ಗೋಮೂತ್ರ ಸಿಂಪರಣೆ ಮಾಡಿ ಮೈದಾನ ಶುದ್ಧಗೊಳಿಸಿ, ಬಳಿಕ ಕನಕದಾಸರ ಜಯಂತಿ ಆಚರಣೆ ಮಾಡಲಾಗಿದೆ ಎಂದರು.
ಮೈಸೂರಿನಲ್ಲಿ ಶಾಸಕ ತನ್ವೀರ್ ಸೇಠ್ ಟಿಪ್ಪು ಪುತ್ಥಳಿ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದರೆ ಶ್ರೀರಾಮ ಸೇನೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

Exit mobile version