Home ನಮ್ಮ ಜಿಲ್ಲೆ ಮತ್ತೆ ಲಘು ಭೂಕಂಪ

ಮತ್ತೆ ಲಘು ಭೂಕಂಪ

0

ಬೀದರ್: ಜಿಲ್ಲೆಯ ಹುಮನಾಬಾದ ತಾಲೂಕಿನ ನಂದಗಾವ್ ಗ್ರಾಮ ಪಂಚಾಯತ್ ಕಚೇರಿಯಿಂದ 1.5 ಕಿಮೀ ದೂರದಲ್ಲಿ ಶನಿವಾರ ಸಂಜೆ 4.08 ನಿಮಿಷಕ್ಕೆ ಲಘು ಭೂಕಂಪ ಸಂಭವಿಸಿದೆ.
ಭೂಕಂಪದ ತೀವ್ರತೆ ರಿಕ್ಟರ್ ಮಾಪನದ ಮೇಲೆ 2.6 ದಾಖಲಾಗಿದೆ. ಭೂಕಂಪದ ತೀವ್ರತೆ ದುರ್ಬಲವಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ಗಾಬರಿಯಾಗುವ ಅಗತ್ಯವಿಲ್ಲ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.

Exit mobile version