Home ನಮ್ಮ ಜಿಲ್ಲೆ ಧಾರವಾಡ ಭಾರತ ಜೋಡದಿಂದಲೂ ಇಲ್ಲ, ಖರ್ಗೆ ಅವರಿಂದಲೂ ಪರಿಣಾಮ ಇಲ್ಲ: ಶೆಟ್ಟರ

ಭಾರತ ಜೋಡದಿಂದಲೂ ಇಲ್ಲ, ಖರ್ಗೆ ಅವರಿಂದಲೂ ಪರಿಣಾಮ ಇಲ್ಲ: ಶೆಟ್ಟರ

0
SHETTAR

ಹುಬ್ಬಳ್ಳಿ : ದೇಶದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್ ಇಲ್ಲದ ಸ್ಥಿತಿ ಬಂದೊದಗಿದೆ. ಬಿಜೆಪಿ ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ಭಾರತ ಜೋಡೊ ಯಾತ್ರೆ ಏನೂ ಪರಿಣಾಮ ಬೀರಿಲ್ಲ. ಹಾಗೆಯೇ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿದ್ದರಿಂದಲೂ ಏನೂ ಪರಿಣಾಮ ಬೀರಲ್ಲ. ನಿನ್ನೆ ಮಲ್ಲಿಕಾರ್ಜುನ ಖರ್ಗೆ ಅವರ ಸ್ವಾಗತ ಸಮಾವೇಶದಿಂದಲೂ ಏನೂ ಪರಿಣಾಮ ಆಗುವುದಿಲ್ಲ ಎಂದು ಹೇಳಿದರು.
ದೇಶದ 7 ವಿಧಾನ ಸಭಾ ಉಪ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಸ್ಥಾನ ಗಳಿಸಿದೆ. ಮಿಕ್ಕಂತೆ ತೆಲಂಗಾಣ, ಒರಿಸ್ಸಾ, ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷಗಳು ಗೆದ್ದಿವೆ. ಕಾಂಗ್ರೆಸ್‌ಗೆ ಅಲ್ಲಿ ಅಡ್ರೆಸ್ಸೇ ಇಲ್ಲ ಎಂದರು.

Exit mobile version