Home ತಾಜಾ ಸುದ್ದಿ ಭಾರತೀಯ ನೌಕಾದಳಕ್ಕೆ ಹರಿಹರದ ಭೂಮಿಕಾ ಆಯ್ಕೆ

ಭಾರತೀಯ ನೌಕಾದಳಕ್ಕೆ ಹರಿಹರದ ಭೂಮಿಕಾ ಆಯ್ಕೆ

0

ದಾವಣಗೆರೆ: ಕಿತ್ತು ತಿನ್ನುವ ಬಡತನದ ಮಧ್ಯೆ ದೃತಿಗೆಡೆದ ಕಠಿಣ ಪರಿಶ್ರಮ ಪಟ್ಟು ಯುವತಿಯೊಬ್ಬಳು ಇದೀಗ ಭಾರತೀಯ ನೌಕಾದಳಕ್ಕೆ ಆಯ್ಕೆಯಾಗಿದ್ದಾರೆ. ಕರ್ನಾಟಕದ ದಾವಣಗೆರೆ ಜಿಲ್ಲೆಯ ಹರಿಹರದ ಯುವತಿ ಭೂಮಿಕಾ ನೌಕಾದಳಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಯುವತಿ.
ಮನೆಗೆ ಆಧಾರ ಸ್ತಂಭವಾಗಿದ್ದ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡಿದ್ದ ಈಕೆಗೆ. ತಾಯಿ ಅಂಗನವಾಡಿಯಲ್ಲಿ ಆಯಾ ಕೆಲಸ ಮಾಡಿ ದುಡಿದು ಉತ್ತಮ ಶಿಕ್ಷಣ ನೀಡಿದ್ದರು.
ಫಾರ್ಮಸಿ ವ್ಯಾಸಂಗ ಮಾಡಿರುವ ಭೂಮಿಕ ಹಲವಾರು ಕೆಲಸಗಳಿಗಾಗಿ ಅರ್ಜಿ ಹಾಕಿ ಅಲೆದಿದ್ದರು. ಛಲ ಬಿಡದೇ ನಿಷ್ಠೆಯಿಂದ ಓದಿ ಬೆಂಗಳೂರಿನಲ್ಲಿ ಪರೀಕ್ಷೆ ಬರೆದು ಕೇರಳದಲ್ಲಿ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ನೌಕಾದಳ ಮೊದಲನೇ ಪಟ್ಟಿಯಲ್ಲೇ ಇವರ ಹೆಸರು ಬಂದಿದ್ದು, ಕುಟುಂಬದಲ್ಲಿ ಸಂತಸ ಹೆಚ್ಚಿಸಿದೆ.

Exit mobile version