Home ನಮ್ಮ ಜಿಲ್ಲೆ ಧಾರವಾಡ ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸಮುದ್ರ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ವಾಗ್ದಾಳಿ

ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸಮುದ್ರ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ವಾಗ್ದಾಳಿ

0

ಹುಬ್ಬಳ್ಳಿ: ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಸಮುದ್ರವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲಾ ಹೇಳಿದರು.
ಬೆಳಗಾವಿಯಿಂದ ನಗರಕ್ಕೆ ಆಗಮಿಸಿ ಇಲ್ಲಿಂದ ದೆಹಲಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹಾಳು ಮಾಡಿದೆ. ಎರಡೂ ಕೈಯಲ್ಲಿ ಲಂಚ ಪಡೆಯುವ ಸರ್ಕಾರವಾಗಿದ್ದು, ಕಮೀಶನ್ ದಂಧೆ ಮಠಗಳನ್ನೂ ಬಿಟ್ಟಿಲ್ಲ. ಬರೀ 40 ಪರ್ಸಂಟೇಜ್ ಅಲ್ಲ 50 ರಷ್ಟು ಕಮೀಶನ್ ಪಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಡಿಜಿಪಿ ಸ್ಥಾನದಲ್ಲಿರುವಂತಹ ಅಧಿಕಾರಿ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗುತ್ತಾರೆ ಎಂದರೆ ಏನರ್ಥ? ಇತಿಹಾಸದಲ್ಲಿಯೇ ಇಂತಹ ಉದಾಹರಣೆಗಳಿಲ್ಲ. ಭ್ರಷ್ಟಾಚಾರದ ಅತೀರೇಕಕ್ಕೆ ಹಿಡಿದ ಕ‌ನ್ನಡಿ ಇದು ಎಂದು ಹೇಳಿದರು.
ಡಿಜಿಪಿ ಹಣ ಪಡೆದು ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂದರೆ ಅದೇ ರೀತಿ ಹಣ ಗೃಹ ಸಚಿವರಿಗೂ ಹೋಗಿರುತ್ತದೆ. ಗೃಹ ಸಚಿವರನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.
ಡಿ.30 ರಂದು ವಿಜಯಪುರದಲ್ಲಿ ಕೃಷ್ಣಾ ನದಿ ನೀರು ಯೋಜನೆಗೆ ಸಂಬಂಧಿಸಿದಂತೆ ಸಮಾವೇಶ ನಡೆಸಲಾಗುತ್ರಿದೆ. ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ಸಮಾವೇಶ ನಡೆಸಲಾಗುವುದು. ಜ .8 ರಂದು ಚಿತ್ರದುರ್ಗದಲ್ಲಿ ಎಸ್ ಸಿ ಎಸ್ಟಿ ಸಮಾವೇಶ ನಡೆಸುತ್ತಿದ್ದೇವೆ. ಭ್ರಷ್ಟ ಬಿಜೆಪಿ ಸರ್ಕಾರ ಬದಲಾಯಿಸಲು ರಾಜ್ಯದ ಜನರು ಕಾಯುತ್ತಿದ್ದಾರೆ ಎಂದರು.

ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದ ಸಮುದ್ರ  ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ವಾಗ್ದಾಳಿ

Exit mobile version