Home ನಮ್ಮ ಜಿಲ್ಲೆ ಬೆಳಗಾವಿ ಗಡಿ ವಿವಾದ: ದೆಹಲಿಯಲ್ಲಿ ನಡ್ಡಾ ಭೇಟಿ ಸಾಧ್ಯತೆ: ಬೊಮ್ಮಾಯಿ

ಬೆಳಗಾವಿ ಗಡಿ ವಿವಾದ: ದೆಹಲಿಯಲ್ಲಿ ನಡ್ಡಾ ಭೇಟಿ ಸಾಧ್ಯತೆ: ಬೊಮ್ಮಾಯಿ

0

ಬೆಂಗಳೂರು: ಇಂದು ಸಂಜೆ ದೆಹಲಿಗೆ ತೆರಳುತ್ತಿದ್ದು, ಗಡಿ ವಿವಾದದ ಕುರಿತು ವಕೀಲರ ಜೊತೆ ಚರ್ಚಿಸುವ ಜೊತೆಗೆ ಸಮಯಾವಕಾಶ ಸಿಕ್ಕಲ್ಲಿ ರಾಜ್ಯ ರಾಜಕಾರಣದ ಕುರಿತು ಹೈಕಮಾಂಡ್ ನಾಯಕರ ಭೇಟಿ ಮಾಡಿ ಮಾತುಕತೆ ನಡೆಸುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ತಿಳಿಸಿದ್ದಾರೆ. ಅಲ್ಲಿ ಪಕ್ಷದ ಅಧ್ಯಕ್ಷ ನಡ್ಡಾ ಅವರನ್ನು ಭೇಟಿ ಮಾಡಬೇಕೆಂದುಕೊಂಡಿದ್ದೇನೆ. ನನಗೆ ಇನ್ನೂ ಅವರ ಭೇಟಿಗೆ ಅನುಮತಿ ಸಿಕ್ಕಿಲ್ಲ. ಅನುಮತಿ ಸಿಗುವ ಭರವಸೆ ಇದೆ’ಎಂದು ಬೊಮ್ಮಾಯಿ ಹೇಳಿದ್ದಾರೆ. ಈ ಮಧ್ಯೆ, ಹಿರಿಯ ವಕೀಲ ಮುಕುಲ್ ರೋಹಟಗಿ ಅವರನ್ನು ಭೇಟಿಯಾಗಿ ಬೆಳಗಾವಿ ಗಡಿ ವಿವಾದದ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸುಸುತ್ತೇನೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್ ಗೋಯಲ್ ಅವರನ್ನೂ ಭೇಟಿ ಮಾಡುವುದಾಗಿ ಹೇಳಿದ್ದಾರೆ.

Exit mobile version